ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶಿಮಂತೂರು ದೇವಸ್ಥಾನದಲ್ಲಿ ಸಂಕ್ರಾಂತಿ ಖುಷಿ; ಕಣ್ಮನ ತಣಿಸಿದ ಸಂಕೀರ್ತನಾ ರಸ

ಮುಲ್ಕಿ: ಮುಲ್ಕಿ ಸಮೀಪದ ಇತಿಹಾಸ ಪ್ರಸಿದ್ಧ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಗುರುವಾರ ಸಂಭ್ರಮದ ಮಕರ ಸಂಕ್ರಾಂತಿ ಉತ್ಸವ ನಡೆಯಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು. ಮಕರ ಸಂಕ್ರಾಂತಿ ಪ್ರಯುಕ್ತ ದೇವಳದಲ್ಲಿ ಶಿಮಂತೂರು ಯುವಕ ಮಂಡಲ- ಯುವತಿ ಮಂಡಲ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಭಜನೆ ನಡೆಯಿತು.

ಈ ಸಂದರ್ಭ ವೇದಮೂರ್ತಿ ಶ್ರೀಕಾಂತ ಭಟ್ ಮಾತನಾಡಿ, ದಕ್ಷಿಣಾಯಣ ಕಳೆದು ಉತ್ತರಾಯಣದ ಪರ್ವಕಾಲದಲ್ಲಿ ಭಜನೆ ಮುಖಾಂತರ ದೇವರನ್ನು ಆರಾಧಿಸಿ ವಿಶ್ವಕ್ಕೆ ಅಂಟಿಕೊಂಡಿರುವ ಕೊರೊನಾ ಮಹಾಮಾರಿಯನ್ನು ಹೋಗಲಾಡಿಸಲು ಪ್ರಯತ್ನಿಸೋಣ ಎಂದರು.

ದೇವಳದ ಆಡಳಿತಾಧಿಕಾರಿ ಚಂದ್ರಪೂಜಾರಿ, ಬಪ್ಪನಾಡು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಮುಲ್ಕಿ ವಿಜಯ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಕಿಶೋರ್ ಶೆಟ್ಟಿ ಬಪ್ಪನಾಡು, ಮಾಜಿ ಪಂಚಾಯತ್ ಸದಸ್ಯ ಹರೀಶ್ ಶೆಟ್ಟಿ ಶಿಮಂತೂರು, ಉದಯ್ ಕುಮಾರ್ ಶೆಟ್ಟಿ ಆದಿಧನ್ ಮುಲ್ಕಿ, ದಿನೇಶ್ಚಂದ್ರ ಅಜಿಲ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

14/01/2021 07:58 pm

Cinque Terre

12.31 K

Cinque Terre

0

ಸಂಬಂಧಿತ ಸುದ್ದಿ