ಮಂಗಳೂರು: ಹಿಂದೆ ಸಮುದ್ರ ವಿಹಾರಕ್ಕೆ ಮಾತ್ರ ಬರುತ್ತಿದ್ದ ಯುವ ಜನರು ಇಂದು ಸಮುದ್ರ ಕಿನಾರೆಯನ್ನು ಸ್ವಚ್ಛಗೊಳಿಸುವುದಕ್ಕಾಗಿಯೂ ಬರುತ್ತಿದ್ದಾರೆ ಎಂಬುದು ಆಶಾದಾಯಕ ಬೆಳವಣಿಗೆಯೇ ಸರಿ.
ಅಂತಹ ಒಂದು ತಂಡವೇ 'ಕ್ಲೀನ್ ಕಡಲ್ ತಂಡ'. ಟೆಕ್ಕಿಯಾಗಿರುವ ಪವಿತ್ರಾರಾಣಿ ಆರಂಭಿಸಿರುವ 'ಕ್ಲೀನ್ ಕಡಲ್' ತಂಡ ಇಂದು ಸೋಮೇಶ್ವರ ಬೀಚ್ ಕ್ಲೀನ್ ಮಾಡಿದೆ. ಈಗಾಗಲೇ ಮೂರು ಬಾರಿ ಸೋಮೇಶ್ವರ ಬೀಚ್ ಕ್ಲೀನ್ ಕಾರ್ಯ ಕೈಗೊಂಡಿರುವ ಈ ತಂಡ ಇಂದು 'ಪೆಪ್ಪೆರೆರೆರೆ' ತುಳು ಸಿನಿಮಾ ತಂಡ, ಗೃಹ ರಕ್ಷಕದಳ, ಹ್ಯಾಂಡ್ಸ್ ಆನ್ ಮಂಗಳೂರು, ಬೀಚ್ ರಿಜುವೆನೇಷನ್ ತಂಡ ಹಾಗೂ ಸ್ಥಳೀಯರೊಂದಿಗೆ ಸೇರಿ ಇಂದು ಬೀಚ್ ಕ್ಲೀನ್ ಕೈಂಕರ್ಯ ದಲ್ಲಿ ತೊಡಗಿತ್ತು.
ಈ ತಂಡಗಳೆಲ್ಲ ಸೇರಿ ಇಂದು ಸುಮಾರು 10-15 ಚೀಲಗಳಷ್ಟು ಗಾಜಿನ ಬಾಟಲ್, ಥರ್ಮಾಕೋಲ್, ಚಪ್ಪಲಿ ಇನ್ನಿತರ ತ್ಯಾಜ್ಯ ಹೆಕ್ಕಿ ಸಂಗ್ರಹ ಮಾಡಿದೆ. ಈ ಕಸ, ತ್ಯಾಜ್ಯವನ್ನು ವಿಲೇವಾರಿ ಮಾಡಿ ಬೀಚ್ ಪರಿಸರವನ್ನು ಇದೀಗ ತ್ಯಾಜ್ಯ ಮುಕ್ತಗೊಳಿಸಲಾಗಿದೆ.
Kshetra Samachara
03/01/2021 02:50 pm