ಉಡುಪಿ: ಮಾರ್ಚ್ ತಿಂಗಳಿನಿಂದ ಮುಚ್ಚಿದ್ದ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಸೆಪ್ಟೆಂಬರ್ 28ರಿಂದ ಭಕ್ತರಿಗೆ ಮುಕ್ತಗೊಳ್ಳಲಿದ್ದು, ಭಕ್ತರು ಮಠಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ.
ಕಳೆದ 6 ತಿಂಗಳಿಂದ ಮುಚ್ಚುಗಡೆಯಾಗಿದ್ದ ಕೃಷ್ಣ ಮಠ ತೆರೆಯಲು ಪರ್ಯಾಯ ಅದಮಾರು ಶ್ರೀಗಳು ನಿರ್ಧರಿಸಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರ ವರೆಗೆ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಇದ್ದು, ಭಕ್ತರು ರಾಜಾಂಗಣದ ಬಳಿ ಇರುವ ಉತ್ತರ ದ್ವಾರದಿಂದ ಮಾತ್ರ ಪ್ರವೇಶ ಪಡೆಯಬಹುದು.
ಮುಂದಿನ ದಿನಗಳಲ್ಲಿ ಸ್ಥಳೀಯ ಭಕ್ತರಿಗೆ ಪಾಸ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಆದರೆ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ.
ಮಠದ ಒಳಗಡೆ ಮಂತ್ರ ಪಠಣ, ಶಬ್ದ ಉಚ್ಚಾರಣೆ ಮಾಡುವಂತಿಲ್ಲ. ಭಕ್ತರು ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿ ಮಾಡಬೇಕು.
ಆದರೆ, ಹಿರಿಯ ನಾಗರಿಕರು ಮತ್ತು ಚಿಕ್ಕ ಮಕ್ಕಳು ಮನೆಯಲ್ಲಿಯೇ ಇದ್ದು ಸಹಕರಿಸಲು ಮನವಿ ಮಾಡಲಾಗಿದೆ.
ಪರಿಸ್ಥಿತಿ ಗಮನಿಸಿ ಮುಂದಿನ ದಿನಗಳಲ್ಲಿ ಭೋಜನ ಪ್ರಸಾದದ ಬಗ್ಗೆ ನಿರ್ಧರಿಸಲಾಗುವುದು. ಸದ್ಯ, ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ಕೃಷ್ಣಮಠದ ವ್ಯವಸ್ಥಾಪಕ ಗೋವಿಂದರಾಜ್ ಹೇಳಿದ್ದಾರೆ.
Kshetra Samachara
20/09/2020 11:31 pm