ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯ ವಾಲ್ಪಾಡಿಯಲ್ಲಿ ಸೋಣದ ಕೋಲ

ಮೂಡುಬಿದಿರೆ: ತಾಲೂಕಿನ ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಾಲ್ಪಾಡಿ ಗ್ರಾಮದಲ್ಲಿ ಶ್ರೀ ರಾಜಂದೈವ ಮತ್ತು ಬ್ರಹ್ಮ ಬೈದರ್ಕಳ ದೈವಸ್ಥಾನಲ್ಲಿ ಕೊಡಮಣಿತ್ತಾಯ ಮತ್ತು ಕುಕ್ಕಿನಂತ್ತಾಯ ದೈವಗಳಿಗೆ ಸೋಣದ ಕೋಲ ನಡೆಯಿತು.

ಸುಮಾರು 105 ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವನ್ನು ಏಳ್ನಾಡು ಗುತ್ತಿನವರು ಕಟ್ಟಿ ಬೆಳೆಸಿದ್ದರು. ನಂತರ ನಾಗಣ್ಣ ಹೆಗ್ಡೆ ಅವರ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಂಡಿದ್ದು ಕಳೆದ 10 ವರ್ಷಗಳಿಂದ ಇಲ್ಲಿ ಸೋಣದ ಕೋಲ ನಡೆಯುತ್ತಾ ಬರುತ್ತಿದೆ. ಊರಿನ ನಾಲ್ಕು ಗುತ್ತು ಬರ್ಕೆಯವರು ಸೇರಿ ಈ ಸೋಣದ ಕೋಲವನ್ನು ಮಾಡುತ್ತಾರೆ. ಬೆಳಗಿನ ವೇಳೆ ದೈವಗಳ ಭಂಡಾರ ಆಗಮನವಾಗಿ ಶುದ್ಧೀಕರಣದ ನಂತರ ದೈವಗಳಿಗೆ ಗಗ್ಗರ ಸೇವೆ ನಡೆಯುತ್ತದೆ.

ಬಹಳ ಕಟ್ಟುನಿಟ್ಟಾಗಿ ನಡೆಯುವ ಈ ಕೋಲದಲ್ಲಿ ಗುತ್ತು ಬರ್ಕೆಯ ಮನೆಯಿಂದ ಭಂಡಾರ ತರುವಾಗ ಕೋಲಕ್ಕೆ ಬಳಸುವ ಯಾವುದೇ ವಸ್ತುವನ್ನು ಬಿಟ್ಟು ಬರುವಂತಿಲ್ಲ ಎಲ್ಲಾ ವಸ್ತುಗಳನ್ನು ಒಂದೇ ಸಲ ತರಬೇಕು ಯಾವುದೇ ವಸ್ತುವನ್ನು ಬಿಟ್ಟು ಬಂದರೆ ಹಿಂತಿರುಗಿ ಮನೆಗೆ ಹೋಗಿ ತರುವಂತಿಲ್ಲ. ಕೋಲ ಮುಗಿದ ನಂತರವೇ ಮನೆಗೆ ಹಿಂತಿರುಗಿ ಹೋಗಬೇಕೆಂಬ ಪ್ರತೀತಿ ಇದೆ.

ಕಮಿಟಿಯ ಮಾಜಿ ಅಧ್ಯಕ್ಷ ಏಳ್ನಾಡು ಗುತ್ತಿನ ವಿಶ್ವನಾಥ ಹೆಗ್ಡೆ ಅವರು ಸೋಣದ ಕೋಲದ ಬಗ್ಗೆ ಮಾಹಿತಿ ಕೃಷಿ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ಫಸಲು ಹೆಚ್ಚಾಗಬೇಕು. ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಭಂಡಾರವನ್ನು ಹೊತ್ತುಕೊಂಡು ಬರುವಾಗ ಹೊಳೆಯನ್ನು ದಾಟಿ ತರಬೇಕಾಗುತ್ತದೆ ಆದ್ದರಿಂದ ಇಲ್ಲಿ ಸೇತುವೆಯ ನಿರ್ಮಾಣ ಅಗತ್ಯವಾಗಿ ಬೇಕಾಗಿದೆ ಎಂದರು. ಇನ್ನು ಸಮಿತಿಯ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ಇನ್ನಿತರರು ಸಮಿತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

Edited By :
PublicNext

PublicNext

07/09/2022 06:13 pm

Cinque Terre

33.92 K

Cinque Terre

0

ಸಂಬಂಧಿತ ಸುದ್ದಿ