ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಜೂ.24 ರಿಂದ ಶರಫುಲ್ ಉಲಮಾ 3 ನೇ ಉರೂಸ್ ಹಾಗೂ ಸನದು ದಾನ ಸಮ್ಮೇಳನ

ಉಳ್ಳಾಲ : ಮಂಜನಾಡಿ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಶಿಲ್ಪಿ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ (ನ.ಮ) ರವರ 3 ನೇ ಉರೂಸ್ ಮುಬಾರಕ್ ಹಾಗೂ ಸನದು ದಾನ ಸಮ್ಮೇಳನ , ಜೂನ್ 24 ರಿಂದ 26 ರ ತನಕ ಮೂರು ದಿನ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅಲ್ ಮದೀನಾ ವ್ಯವಸ್ಥಾಪಕ ಅಬ್ದುಲ್ ಖಾದರ್ ಸಖಾಫಿ ಹೇಳಿದರು.

ಅವರು ಗುರುವಾರ ಅಲ್ ಮದೀನಾದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜೂನ್ 24 ಶುಕ್ರವಾರ ಸಂಜೆ 5 ಗಂಟೆಗೆ ಸ್ವಾಗತ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಹಾಜಿ ಬಾಂಬೆ ಧ್ವಜಾರೋಹಣಗೈಯಲಿದ್ದಾರೆ. ಸಂಜೆ 7 ಕ್ಕೆ ಮಹ್ಮೂದ್ ಫೈಝಿ ವಾಲೆಮುಂಡೇವು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜೂನ್ 26 ಭಾನುವಾರ ಮಧ್ಯಾಹ್ನ‌ 2 ಗಂಟೆಗೆ ಮಹಿಳಾ ಶರೀಅತ್ ಕಾಲೇಜಿನ ಸ್ವಾಫಿಯಾ ಸನದು ದಾನ ,3:30ಕ್ಕೆ ಮರ್ಝೂಕಿ ಹಾಗೂ ಹಿಫ್ಲ್ ಸನದು ದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಎನ್ ಎಸ್ ಕರೀಂ, ಮಜೀದ್ ಹಾಜಿ, ಫಾರೂಕ್ ಹಾಜಿ, ಕೆಎಂಕೆ ಮಾಸ್ಟರ್, ಮುನೀರ್ ಸಖಾಫಿ, ಅಬ್ದುಲ್ ರಝಾಕ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/06/2022 05:51 pm

Cinque Terre

4.66 K

Cinque Terre

0

ಸಂಬಂಧಿತ ಸುದ್ದಿ