ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾಣಿಲ‌ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ‌ವರ‌ಮಹಾಲಕ್ಷ್ಮಿ ಆಚರಣೆ

ಮಂಗಳೂರು:ನಾಡಿನಾದ್ಯಂತ ವರಮಹಾಲಕ್ಷ್ಮಿ ಅಚರಣೆ ಜೋರಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ

ಮಾಣಿಲ ಶ್ರೀ ಧಾಮ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಪರಮಹಂಸ ಮೋಹನ ದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ವರಮಹಾಲಕ್ಣ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.ಇನ್ನೂ ಕೋವಿಡ್ ಕಾರಣದಿಂದಾಗಿ ಈ ಬಾರಿ ಸರಳವಾಗಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು ಕಳೆದ 48 ದಿನಗಳಿಂದ ಕ್ಷೇತ್ರದಲ್ಲಿ ಸಾಮೂಹಿಕ ಮಹಾಲಕ್ಷ್ಮಿ ವೃತಾಚರಣೆ ನಡೆದ ಬಳಿಕ ಇಂದು ಮಹಾಲಕ್ಷ್ಮಿ ಅಮ್ಮನಿಗೆ ವಿಶೇಷ ಪೂಜೆ, ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿದೆ.

ಹೌದು ಈ ಹಬ್ಬವನ್ನು ತುಳುನಾಡಿನಲ್ಲಿ ಬಹಳನೇ ವಿಶೇಷವಾಗಿ ಆಚರಣೆ ಮಾಡುತ್ತಾರೆ. ತುಳುನಾಡಿನ ಕಾಲಕ್ರಮದಂತೆ ಸೋಣ ತಿಂಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಬರುತ್ತೆ. ಈ ಹಬ್ಬವನ್ನು ಎಲ್ಲಾ ಮುತ್ತೈದೆಯರು ಸೇರಿ ಆರಾಧಿಸುತ್ತಾರೆ. ಈ ಹಬ್ಬ ತುಳುನಾಡಿಗೆ ಪಾರಂಪರಿಕವಾದ ಹಬ್ಬ ಅಲ್ಲದೇ ಇದ್ದರೂ ಕರಾವಳಿ ಭಾಗದಲ್ಲಿ ಸಂತಸ‌ ತರುವ‌ ಹಬ್ಬ. 

ತುಳುನಾಡಿನಲ್ಲಿ ಆಟಿ ತಿಂಗಳ ನಂತರ‌ ಬರುವ‌ ಮಾಸವೇ‌ ಸೋಣ. ಈ ಸೋಣ(ಶ್ರಾವಣ) ತಿಂಗಳಲ್ಲಿ ಹಬ್ಬ ಹರಿದಿನಗಳು ಶುರುವಾಗಿ ಮನೆಯೆಲ್ಲಾ‌ ಸಂತಸ‌ ತರಲು ಆರಂಭಿಸುತ್ತದೆ. ಈ ತಿಂಗಳಲ್ಲಿ ಪುರುಷರು ಶನಿವಾರ ವೃತ ಮಾಡಿದರೆ, ಮಹಿಳೆಯರು ಶುಕ್ರವಾರ‌ ವೃತಾಚರಣೆ‌ ಮಾಡಿ, ಮನೆ ಮಂದಿಯರ ಶ್ರೇಯಸ್ಸಿಗಾಗಿ ಬೇಡಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಬರುವ‌‌ ಶ್ರಾವಣ‌ ಮಾಸದ ಎರಡನೇ‌ ಶುಕ್ರವಾರವನ್ನು ‘ವರಮಹಾಲಕ್ಷ್ಮಿ ವೃತ ಪೂಜೆ’ ಎಂದು ಕರೆಯುತ್ತಾರೆ.

ಈ ವರಮಹಾಲಕ್ಷ್ಮೀ ಪೂಜೆಯು ಕರಾವಳಿಗೆ ಕಾಲಿಟ್ಟಿದ್ದೇ ಹತ್ತು ವರ್ಷಗಳಿಂದೀಚೆಗೆ. ಜನರು ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ದೇವಿ ಆರಾಧನೆ‌ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.

Edited By : Nagesh Gaonkar
Kshetra Samachara

Kshetra Samachara

20/08/2021 06:49 pm

Cinque Terre

11.22 K

Cinque Terre

0

ಸಂಬಂಧಿತ ಸುದ್ದಿ