ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಶಿಲಾಮಯ ವಠಾರದ ಅಶ್ವತ್ಥಕಟ್ಟೆಯ ಸಮರ್ಪಣೆಯ ಧಾರ್ಮಿಕ ಸಮಾರಂಭ ಭಾನುವಾರ ಬೆಳಗ್ಗೆ ನಡೆಯಿತು.
ಅಶ್ವಥಕಟ್ಟೆ ಸಮರ್ಪಣೆ ಪೂರ್ವಭಾವಿಯಾಗಿ ವೇದಮೂರ್ತಿ ಶ್ರೀ ಗೋಪಾಲಕೃಷ್ಣ ತಂತ್ರಿ ಶಿಬರೂರು ನೇತೃತ್ವದಲ್ಲಿ ಶನಿವಾರ ಸಂಜೆ ವಾಸ್ತು ಪೂಜೆ, ವಾಸ್ತು ಬಲಿ, ರಾಕ್ಷೋಘ್ನ ಹೋಮ ನಡೆಯಿತು.
ಭಾನುವಾರ ಬೆಳಿಗ್ಗೆ ಅರ್ಚಕ ಮಧುಸೂದನ ಆಚಾರ್ಯ ನೇತೃತ್ವದಲ್ಲಿ ಅಶ್ವತ್ಥ ಪೂಜೆ ನಡೆಯಿತು.ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ಮಾತನಾಡಿ, ದೇವಳದಲ್ಲಿ ಇಂದು ಅಶ್ವತಕಟ್ಟೆ ಸಮರ್ಪಣೆ ನಡೆದಿದ್ದು, ಕಿರುಷಷ್ಠಿ ಮಹೋತ್ಸವ ಜ.18 ರಿಂದ 19ರ ವರೆಗೆ ನಡೆಯಲಿದೆ.
ಶಿಬರೂರು ವೇ.ಮೂ. ಶ್ರೀ ಗೋಪಾಲಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ ಜ.18 ರಂದು ಬೆಳಿಗ್ಗೆ 9ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 8ಕ್ಕೆ ಪಂಚಮಿ ಬಲಿ ಉತ್ಸವ. ಜ.19 ರಂದು ಬೆಳಿಗ್ಗೆ ಕಿರುಷಷ್ಠಿ ಉತ್ಸವ, ಚಂಡಿಕಾ ಯಾಗ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ 8ಕ್ಕೆ ಕಿರುಷಷ್ಠಿ ಬಲಿ ಉತ್ಸವ ಜರುಗಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ "ಶ್ರೀ ದೇವಿ ಮಹಾತ್ಮೆ" ಯಕ್ಷಗಾನ ಬಯಲಾಟ ಜರುಗಲಿದೆ ಎಂದರು.
Kshetra Samachara
17/01/2021 11:51 am