ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಕಲಿಯುಗ ವರದ ಅಯ್ಯಪ್ಪನ ಪವಾಡ - ಬಾಯಿ ಬಾರದ ಬಾಲಕ ಮಾತು ಆರಂಭಿಸಿದ

ಪುತ್ತೂರು : ಶಬರಿಮಲೆಯ ಸ್ವಾಮಿ ಅಯ್ಯಪ್ಪನನ್ನು ಭಕ್ತರು ಕಲಿಯುಗ ವರದನೆಂದೇ ಕೊಂಡಾಡುತ್ತಾರೆ. ಈತ ಭಕ್ತಿಗೆ ಒಲಿಯುವ ದೇವ. ಭಕ್ತರ ಕಷ್ಟವನ್ನು ಅಳಿಸಿ ಇಷ್ಟಾರ್ಥವ ನೆರವೇರಿಸುವವನು ಎನ್ನುತ್ತಾರೆ‌. ಇದೀಗ ಅಯ್ಯಪ್ಪನ ಪವಾಡದಿಂದ ಒಂದು ಮಾತೂ ಆಡದ ಬಾಲಕನೋರ್ವ ಬಾಯ್ದೆರೆದು ಮಾತನಾಡಿರುವ ಪರಮಾಶ್ಚರ್ಯವೆನಿಸುವ ಘಟನೆ ನಡೆದಿದೆ.

ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ತೊದಲು ತೊದಲಾಗಿ ಮಾತನಾಡುತ್ತಿದ್ದ. ಸರಿಯಾಗಿ ಒಂದು ಶಬ್ದವನ್ನೂ ಮಾತನಾಡುತ್ತಿರಲಿಲ್ಲ. ಕಳೆದ ವರ್ಷ ಅಯ್ಯಪ್ಪ ಮಾಲೆ ಹಾಕಿ, 48ದಿನಗಳ ಕಾಲ ಕಠಿಣ ವ್ರತಾಚರಣೆ ನಡೆಸಿ ಶಬರಿಮಲೆ ಏರಿದ್ದ. ಈ ಬಾರಿ ಮತ್ತೆ ಮಾಲೆ ಹಾಕಿದ್ದಾನೆ.

ಒಂದು ವರ್ಷದ ಹಿಂದೆ ಮಾತನಾಡಲು ಚಡಪಡಿಸುತ್ತಿದ್ದ ಬಾಲಕ ಇಂದು ಅಯ್ಯಪ್ಪ ಸ್ವಾಮಿಯ ಶರಣು ಕರೆಯುತ್ತಾನೆ. ಎಂಟು ಶರಣನ್ನು ಪ್ರಸನ್ನ ಯಾವುದೇ ತೊಂದರೆಯಿಲ್ಲದೆ ಕರೆಯುತ್ತಾರೆ. ಬಳಿಕದ ಪದಗಳಲ್ಲಿ ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುವಷ್ಟಿದೆ. ಈ ಬಾರಿ ಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎನ್ನುವ ನಿರೀಕ್ಷೆಯಲ್ಲಿ ಹಿರಿಯ ಸ್ವಾಮಿಗಳಲ್ಲಿದೆ.

ಈತನಿಗೆ ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲಾಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಮಾತ್ರ ಕೇಳಿಸುತ್ತಿದೆ. ಮೊದಲ ಬಾರಿಗೆ ಮಾಲೆ‌ ಹಾಕಿದ್ದ ಸಂದರ್ಭ ಈತ ಕೈ ಸನ್ನೆ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಬಾಯಲ್ಲಿ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ‌ ತಂದಿದೆ. ಇಂತಹ‌ ಹಲವು ಉದಾಹರಣೆಗಳನ್ನು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ಉದಾಹರಣೆಯ ಸಹಿತ ನೀಡುತ್ತಾರೆ.

ಈ ಸಾಲಿಗೆ ಪ್ರಸನ್ನ ಕೂಡಾ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

Edited By : Suman K
Kshetra Samachara

Kshetra Samachara

11/12/2024 07:27 pm

Cinque Terre

11.12 K

Cinque Terre

1

ಸಂಬಂಧಿತ ಸುದ್ದಿ