ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: "ಪ್ರಾಚೀನತೆಯ ಕಸೂತಿ ಕಲೆ"; ಆಧುನಿಕತೆಯ ಭರಾಟೆಯಲ್ಲೂ ಕುಗ್ಗದ ಜನಪ್ರಿಯತೆ!

ಬ್ರಹ್ಮಾವರ: ಆಧುನಿಕ ಫ್ಯಾಷನ್ ಯುಗದಲ್ಲೂ ಪ್ರಾಚೀನ ಕಸೂತಿ ಕಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಆ ಕಲೆಯ ಅನನ್ಯತೆಯನ್ನು ಸಾರಿ ಹೇಳುತ್ತಿದೆ.

ಫ್ಯಾಷನ್ ಕುರಿತು ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಸಕ್ತರು. ಕಂಪ್ಯೂಟರ್ ನಲ್ಲಿ ಆಗದ ಕೆಲವು ವಿನ್ಯಾಸಗಳನ್ನು ಕೈಯಿಂದ ರಚಿಸಲು ಸಾಧ್ಯವಾಗಿದ್ದು, ಅದೆಷ್ಟೋ ಕಲಾವಿದರು ಇಂದಿಗೂ ಸೃಜನಶೀಲತೆಯಿಂದ ಇದ್ದಾರೆ.

ಉತ್ತರ ಭಾರತದಲ್ಲಿ ಬಟ್ಟೆಯಲ್ಲಿ ಬಿಡಿಸುವ ಚಿತ್ತಾರದ ಕಸೂತಿ ಕಲೆಗೆ ಇಡೀ ಭಾರತದಲ್ಲಿ ಬೇಡಿಕೆ ಇದೆ. ಟೈಲರ್ ಕೇವಲ ಬಟ್ಟೆಯನ್ನು ಮಾತ್ರ ಹೊಲಿದರೆ, ಅದಕ್ಕೆ ಮೆರುಗು ನೀಡುವುದು ವಿವಿಧ ಬಣ್ಣ ಚಿತ್ತಾರದ ಮಾನವ ನಿರ್ಮಿತ ಕಸೂತಿ ಕಲೆ.

ಬ್ರಹ್ಮಾವರದ ಫ್ಯಾಷನ್ ಡಿಸೈನರ್ ಜಗದೀಶ್ ಆಚಾರ್ಯ ಎ.ಜೆ. ಫ್ಯಾಷನ್ ಡಿಸೈನಿಂಗ್ ಸೆಂಟರ್‌ನಲ್ಲಿ ಹಲವಾರು ಕಸೂತಿ ಕಲಾಕಾರರನ್ನು ಇರಿಸಿಕೊಂಡು ಉಡುಪಿ ಭಾಗದ ಫ್ಯಾಷನ್ ಲೋಕಕ್ಕೆ ಮೆರುಗು ನೀಡುತ್ತಿದ್ದಾರೆ. ಹೀಗೆ ಪರಿಸರ ಮಾಲಿನ್ಯವಲ್ಲದ ಅನೇಕ ಕಲೆಗಳು ಕಲಾವಿದರ ಬದುಕಿಗೆ ಸಹಕಾರಿಯಾಗಿದೆ.

Edited By : Somashekar
Kshetra Samachara

Kshetra Samachara

07/10/2022 06:07 pm

Cinque Terre

12.4 K

Cinque Terre

0

ಸಂಬಂಧಿತ ಸುದ್ದಿ