ಮಣಿಪಾಲ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.
'ಬ್ಲಾಗರ್ಸ್ ಮೀಟ್-ಪ್ರವಾಸೋದ್ಯಮ ಪುನರಾವಲೋಕನ' ಎಂಬ ಸಂದೇಶ ದೊಂದಿಗೆ ಮಣಿಪಾಲದ ಜಿಲ್ಲಾಡಳಿತದ ಸಂಕೀರ್ಣದಲ್ಲಿ ಶಾಸಕ ಕೆ.ರಘುಪತಿ ಭಟ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಮಣಿಪಾಲ ಜಿಲ್ಲಾಧಿಕಾರಿ ಸಂಕೀರ್ಣದಿಂದ ಬೈಕ್ ರ‍್ಯಾಲಿಯು ಸಿಂಡಿಕೇಟ್ ವೃತ್ತ- ಬಬ್ಬುಸ್ವಾಮಿ ದೇವಸ್ಥಾನ ಎದುರು ಟೈಗರ್ ಸರ್ಕಲ್- ಕಲ್ಸಂಕ ಅಮ್ಮುಂಜೆ ಪೆಟ್ರೋಲ್ ಬಂಕ್ ಮೂಲಕ ಮಲ್ಪೆ ಬೀಚ್ ಗಾಂಧಿ ಪ್ರತಿಮೆ ಬಳಿ ಸಮಾಪನಗೊಳ್ಳಲಿದೆ.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕಿ ಅಕ್ಷಯ್ ಮಚ್ಚೀಂದ್ರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/09/2022 10:24 pm