ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಕೊರೋನ ದಿನಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಗಿತಗೊಂಡಿದ್ದ ಸಂಕ್ರಾಂತಿಯ ಅನ್ನಸಂತರ್ಪಣೆ ಸೇವೆ ಆರಂಭಗೊಂಡಿತು.
ಈ ಸಂದರ್ಭ ದೇವಳದ ಆಡಳಿತಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ ದೇವಳದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯವಾಗಿದ್ದು ದೇವಳಕ್ಕೆ ಬರುವ ಭಕ್ತರು ಸರಕಾರದ ಕೋರೋನ ನಿಯಮಗಳನ್ನು ಪಾಲಿಸಿಕೊಂಡು ಸಾಮಾಜಿಕ ಅಂತರದ ಮೂಲಕ ಎಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಉದಯ ಕುಮಾರ್ ಶೆಟ್ಟಿ ಹೋಟೆಲ್ ಆಧಿಧನ್,ಹರೀಶ್ ಶೆಟ್ಟಿ ಶಿಮಂತೂರು, ದಿನೇಶ್ಚಂದ್ರ ಅಜಿಲ,ಜಯ ಪ್ರಕಾಶ್, ದೇವಳದ ಅರ್ಚಕರು ಹಾಗೂ ಭಕ್ತರು ಉಪಸ್ಥಿತರಿದ್ದರು.
Kshetra Samachara
15/12/2020 06:46 pm