ಮುಲ್ಕಿ: ಮುಲ್ಕಿ ಸಮೀಪದ ಪಂಜಿನಡ್ಕ ಅನುದಾನಿತ ಕೆಪಿ ಎಸ್ ಕೆ ಸ್ಮಾರಕ ಪ್ರೌಢಶಾಲೆ ಯಲ್ಲಿ 2020 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ವಿದ್ಯಾ ಪ್ರಚಾರಣಿ ಸಂಘದ ಅಧ್ಯಕ್ಷರಾದ ರಂಗನಾಥ ಶೆಟ್ಟಿ ವಹಿಸಿ ಮಾತನಾಡಿ ದಾನಿಗಳು ನೀಡಿದ ವಿದ್ಯಾರ್ಥಿವೇತನವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಸಾಧಿಸುವ ಛಲ ಹೊಂದಿರಬೇಕು ಎಂದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ನಾಗಭೂಷಣರಾವ್ ಮಾತನಾಡಿ ಕೊರೋನಾ ನಡುವೆಯೂ ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯವಾಗಿದ್ದು ದುಶ್ಚಟಗಳಿಂದ ದೂರವಿದ್ದು ನಿಸ್ವಾರ್ಥ ಸೇವೆಯಿಂದ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಗಂಗಾಧರ ಶೆಟ್ಟಿ ಬರ್ಕೆ ತೋಟ, ಶಾಲಾ ಪ್ರೌಢ ಹಾಗೂ ಪ್ರಾಥಮಿಕ ಮುಖ್ಯೋಪಾಧ್ಯಾಯರು ಗಳಾದ ಗ್ರೆಟ್ಟಾ ರೊಡ್ರಿಗಸ್, ಅಂಬರೀಶ್ ಲಮಾಣಿ, ಮಾಜೀ ಪಂಚಾಯತ್ ಸದಸ್ಯ ಮನೋಹರ ಕೋಟ್ಯಾನ್, ಹರೀಶ್ ಶೆಟ್ಟಿ,ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾ ಪ್ರಚಾರಣಿ ಸಂಘದ ಪದಾಧಿಕಾರಿಗಳಾದ ಅಚ್ಚುತ ಮಾಸ್ತರ್, ಗಿರಿಧರ ಕಾಮತ್ ಕೆದುಬರಿ, ವಿಠ್ಠಲ್ ಮಾಸ್ಟರ್, ಅನಿಲ್ ಕೊಲಕಾಡಿ, ದಿನೇಶ್ಚಂದ್ರ ಅಜಿಲ, ವಾಸು ಪೂಜಾರಿ ಕೊಲಕಾಡಿ, ನಿತಿನ್ ಗಟ್ಟಿ ಮುಲ್ಕಿ, ಉಪಸ್ಥಿತರಿದ್ದರು. ಮನೋಹರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕಾರ್ತಿಕ್, ಸ್ವಸ್ತಿಕ್, ಸುದೀಕ್ಷಾ, ಮಾನಸ, ಲಿಖಿತ, ರಶ್ಮಿ ಎನ್, ಅಂಕಿತಾ, ಅಕ್ಷತಾ, ಭವಿತ್ ಕುಲಾಲ್ ಮತ್ತಿತರನ್ನು ಗೌರವಿಸಲಾಯಿತು ಹಾಗೂ ಆರ್ಥಿಕವಾಗಿ ಹಿಂದುಳಿದ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳು ಕೊಡಮಾಡಿದ ಸಮವಸ್ತ್ರವನ್ನು ವಿತರಿಸಲಾಯಿತು.
Kshetra Samachara
24/11/2020 02:09 pm