ಮೂಡುಬಿದಿರೆ: ರೈತರು ಮಾತ್ರ ಸಮಯದ ಮುಖ ನೋಡದೆ ಕೆಲಸ ಮಾಡುವವರು. ಆದರೆ, ಸಾಂಪ್ರದಾಯಿಕ ಕೃಷಿಯಷ್ಟೇ ಅವರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡದು. ಅದಕ್ಕಾಗಿ ಆಧುನಿಕ ಕೃಷಿ ಪದ್ಧತಿ ಅನುಸರಿಸುವ ಜತೆಗೆ ಹೈನುಗಾರಿಕೆ, ಜೇನು ಕೃಷಿಯಂಥ ಉಪಕಸುಬುಗಳನ್ನೂ ನಿಯತ್ತಿನಿಂದ ನಡೆಸಿಕೊಂಡು ಬರುವುದರಿಂದ ಅವರ ಬದುಕು ಹಸನಾಗಬಲ್ಲುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕರ್ನಾಟಕ ಸರ್ಕಾರ ಮತ್ತು ದ.ಕ. ಜಿಪಂ ತೋಟಗಾರಿಕೆ ಇಲಾಖೆ ಮತ್ತು ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ನಡೆದ ದ್ವಿದಿನ ಜೇನು ಕೃಷಿ ತರಬೇತಿ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ಸುಚರಿತ ಶೆಟ್ಟಿ, ಸುಜಾತಾ ಕೆ.ಪಿ., ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಜಿಪಂ ಹಿರಿಯ ತೋಟಗಾರಿಕೆ ನಿರ್ದೇಶಕ ಪ್ರವೀಣ್, ಕೃ.ವಿ.ವಿ. ಕೇಂದ್ರ ಅಧ್ಯಕ್ಷ ಜಿನೇಂದ್ರ ಜೈನ್ ಭಾಗವಹಿಸಿದ್ದರು.
ಬಂಟ್ವಾಳದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಹಾಗೂ ರಾಜ್ಯ ಸರ್ಕಾರದ ಈ ಸಾಲಿನ `ಸಹಕಾರ ರತ್ನ' ಪ್ರಶಸ್ತಿ ಪುರಸ್ಕೃತ, ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಕೃಷಿ ವಿಚಾರ ವಿನಿಮಯ ಕೇಂದ್ರ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸನ್ಮಾನ ಪತ್ರ ವಾಚಿಸಿದರು. ಪ್ರಗತಿಪರ ಜೇನುಕೃಷಿಕ ರಾಧಾಕೃಷ್ಣ ಜೇನು ಕೃಷಿ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕಾ ಅಧಿಕಾರಿ ಯುಗೇಂದ್ರ ಸ್ವಾಗತಿಸಿದರು. ಹಿರಿಯ ತೋಟಗಾರಿಕೆ ನಿರ್ದೇಶಕ ಪ್ರವೀಣ್ ಪ್ರಸ್ತಾವನೆಗೈದರು. ಕೃ.ವಿ.ವಿ. ಕೇಂದ್ರ ಕಾರ್ಯದರ್ಶಿ ದಯಾನಂದ ಭಟ್ ನಿರೂಪಿಸಿ, ವಂದಿಸಿದರು.
Kshetra Samachara
21/11/2020 10:29 pm