ಮುಲ್ಕಿ: ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನಾಚರಣೆ ಅಂಗವಾಗಿ ಉಪನ್ಯಾಸ ಹಾಗೂ ಮುಲ್ಕಿ ಅಂತರ ವಲಯ ಕಾಂಗ್ರೆಸ್ ಸಮಿತಿಯ ಸಾಂಸ್ಕೃತಿಕ ಸ್ಪರ್ಧಾ ಕೂಟ ಗುರುವಾರ ಹಳೆಯಂಗಡಿಯ ಹರಿ ಓಂ ಸಭಾಂಗಣದಲ್ಲಿ ನಡೆಯಿತು. ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅಜಾತಶತ್ರುವಾಗಿದ್ದು, ಉಕ್ಕಿನ ಮಹಿಳೆಯಾಗಿದ್ದರು. ಉಳುವವನೇ ಹೊಲದೊಡೆಯ ಕಾನೂನು ಮೂಲಕ ಕೋಟ್ಯಂತರ ಹಿಂದುಳಿದ ವರ್ಗದವರಿಗೆ ಆಸರೆಯಾಗಿದ್ದರು. ಯುವ ಜನಾಂಗ ಇಂದಿರಾಜೀಯವರ ಆದರ್ಶ ಪಾಲಿಸಲು ಮುಂದಾಗಬೇಕೆಂದರು. ಅಧ್ಯಕ್ಷತೆಯನ್ನು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ವಹಿಸಿದ್ದರು. ಕೆಪಿಸಿಸಿ ಕೋಆರ್ಡಿನೇಟರ್ ಪ್ರತಿಭಾ ಕುಳಾಯಿ ದಿ. ಇಂದಿರಾ ಗಾಂಧಿಯವರ ಸಾಧನೆಗಳ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ದ.ಕ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮಮತಾ ಗಟ್ಟಿ, ಬಿಸಿಸಿ ಸದಸ್ಯರಾದ ಗೋಪಿನಾಥ ಪಡಂಗ, ವಿಮಲಾ ಎಸ್. ಪೂಜಾರಿ, ಮುಲ್ಕಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರಿಗೆ ನಾನಾ ಸ್ಪರ್ಧೆ ನಡೆಯಿತು.
Kshetra Samachara
19/11/2020 07:12 pm