ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಸೆಮಣೆಗೆ ಬುಲೆಟಲ್ಲಿ ಬಂದ ಮದುಮಗಳು..!

ಮಂಗಳೂರು: ಹಸೆಮಣೆಗೆ ಏರಲು ಮಧುವಣಗಿತ್ತಿ ಬುಲೆಟ್ ನಲ್ಲಿ ಮದುವೆ ಮಂಟಪಕ್ಕೆ ಎಂಟ್ರಿಯಾಗಿದ್ದು ಮದುವೆಗೆ ಬಂದಿದ್ದವರನ್ನು ಹುಬ್ಬೇರಿಸುವಂತೆ ಮಾಡಿತ್ತು. ಮಂಗಳೂರಿನ ಸುರತ್ಕಲ್ ಮೂಲದ ಪೂಜಾ ಎಂಬ ವಧು ಬುಲೆಟ್ ಮೂಲಕ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಸುರತ್ಕಲ್ ನ ಪೂಜಾ ಹಾಗೂ ಆಕಾಶ್ ಮದುವೆ ನವೆಂಬರ್ ನಾಲ್ಕರಂದು ನಡೆದಿತ್ತು.

ಬುಲೆಟ್ ಪ್ರೇಮಿಯಾಗಿರುವ ಪೂಜಾ ಸಿಂಗಾರಗೊಂಡಿದ್ದ ಕಾರನ್ನು ಹತ್ತಿ ಬರುವ ಬದಲು ತನ್ನ ಸ್ವಂತ ಬುಲೆಟ್ ಓಡಿಸಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿಯಾಗಿದ್ದಳು. ಕಾಸರಗೋಡು ಮೂಲದ ಮ್ಯಾಚ್ ಫ್ರೇಮ್ ವೆಡ್ಡಿಂಗ್ ಸಂಸ್ಥೆಯ ಕ್ಯಾಮರಮೆನ್ಸ್ ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ಬುಲೆಟ್ ರಾಣಿಯ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

Edited By : Nagesh Gaonkar
Kshetra Samachara

Kshetra Samachara

11/11/2020 05:30 pm

Cinque Terre

39.24 K

Cinque Terre

14

ಸಂಬಂಧಿತ ಸುದ್ದಿ