ಮಂಗಳೂರು: ಜಾರ್ಜ್ ಫೆರ್ನಾಂಡಿಸ್ ಅಭಿಮಾನಿ ಬಳಗ ಕರಂಬಾರು ವತಿಯಿಂದ ದಿ.ಜಾರ್ಜ್ ಫೆರ್ನಾಂಡಿಸ್ ಸ್ಮರಣಾರ್ಥವಾಗಿ ಮಂಗಳೂರಿನ ಕರಂಬಾರು ಶಾಲೆ ಬಸ್ ತಂಗುದಾಣ ಉದ್ಘಾಟನೆ ಕರಂಬಾರಿನಲ್ಲಿ ನಡೆಯಿತು. ಜಾರ್ಜ್ ಫರ್ನಾಂಡಿಸ್ ಅವರ ಸಹೋದರ ಮೈಕೆಲ್ ಫೆರ್ನಾಂಡಿಸ್ ಚಾಲನೆ ನೀಡಿದರು. ಈ ಸಂದರ್ಭ ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, " ಜಾರ್ಜ್ ಫೆರ್ನಾಂಡಿಸ್ ಅವರ ಕೊಡುಗೆ ಈ ದೇಶಕ್ಕೆ ಅಪಾರವಾಗಿದೆ. ಕಾರ್ಮಿಕರ ಮೇಲಾಗುವ ದಬ್ಬಾಳಿಕೆ ವಿರುದ್ಧ ಹೋರಾಡಿ ಅವರು ಕಾರ್ಮಿಕರಿಗಾಗಿ ಜೈಲಿಗೆ ಹೋದವರು. ಆದರೆ, ಇವತ್ತು ಯಾರಾದರೂ ಜೈಲಿಗೆ ಹೋಗಿ ಬಂದಿದ್ದಾರೆ ಅಂದ್ರೆ ಅವರ ಭ್ರಷ್ಟಾಚಾರ ಗುಣವೇ ಅದಕ್ಕೆ ಕಾರಣ" ಎಂದು ಮಾರ್ಮಿಕವಾಗಿ ನುಡಿದರು. ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಜಾರ್ಜ್ ಫೆರ್ನಾಂಡಿಸ್ ಅಭಿಮಾನಿ ಬಳಗ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್, ಉಪಾಧ್ಯಕ್ಷ ವಾಲ್ಟರ್ ಮೊಂತೇರೊ, ಕಾರ್ಯದರ್ಶಿ ಗ್ರೇಶನ್ ಮಥಾಯಸ್, ಫೆಲಿಸ್ ಮಥಾಯಿಸ್, ಆಲ್ವಿನ್ ಮಥಾಯಿಸ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/11/2020 08:12 pm