ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಜಲ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಕೋಟ ಶ್ರೀನಿವಾಸ ಪೂಜಾರಿ

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವತಿಯಿಂದ "ಮಳೆನೀರಿನೊಂದಿಗೆಅನುಸಂಧಾನ"ಮಳೆ ನೀರು ಕೊಯ್ಲು ಘಟಕ ವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿ ಬೇಸಗೆಯಲ್ಲಿ ನೀರಿನ ಅಭಾವವನ್ನು ತಪ್ಪಿಸಲು ಮಳೆ ಕೊಯ್ಲು ಪೂರಕವಾಗಿದ್ದು ಪ್ರತಿಯೊಬ್ಬ ನಾಗರಿಕರು ಜಲಕ್ಷಾಮವನ್ನು ನೀಗಿಸಲು ಮಳೆ ಕೊಯ್ಲು ಅಳವಡಿಸಲು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಳೆ ನೀರಿನೊಂದಿಗೆ ಅನುಸಂಧಾನ ಲೋಗೊ ವನ್ನು ದ.ಕ. ಜಿಲ್ಲಾಧಿಕಾರಿಗಳಾದ

ಡಾ. ರಾಜೇಂದ್ರ ಕೆ.ವಿ. ಅನಾವರಣಗೊಳಿಸಿ ಮಳೆ ಕೊಯ್ಲು ಕಾರ್ಯಕ್ರಮಕ್ಕೆ ಮಹತ್ವ ನೀಡುತ್ತಿರುವ ಮುಲ್ಕಿ ನಗರ ಪಂಚಾಯತ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಳೆ ಕೊಯ್ಲಿನ ಮಾದರಿಗೆ ಚಾಲನೆ ನೀಡಿದರು.ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ತರಬೇತುದಾರರಾದ ಜೋಸೆಫ್ ಜಿ ಎಮ್ ರೆಬೆಲ್ಲೊ ಅವರು ಮಳೆಕೊಯ್ಲಿನ ಬಗ್ಗೆ ಮಾಹಿತಿ ನೀಡಿ ಮಾನವನ ಜೀವನ ಅಂಶದಲ್ಲಿ ಜಲ ಪ್ರಮುಖವಾಗಿದ್ದು ಜಲ ಉಳಿಸಿ ಸಂರಕ್ಷಣೆ ಮಾಡುವುದು ಆದ್ಯ ಕರ್ತವ್ಯ ವಾಗಿದ್ದು ಮಳೆಕೊಯ್ಲು ಪೂರಕ ಎಂದು ಹೇಳಿದರು. ಮಳೆ ಕೊಯ್ಲು ಬಗ್ಗೆ ಮಾಹಿತಿ ಪತ್ರ ವನ್ನು ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷರಾದ ಸುನಿಲ್ ಆಳ್ವ ಬಿಡುಗಡೆಗೊಳಿಸಿದರು.

ಮುಲ್ಕಿಯ ವಿಶೇಷ ತಹಶೀಲ್ದಾರ್ ಮಾಣಿಕ್ಯ ಎನ್, ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ, ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಸದಸ್ಯರಾದ ಪುತ್ತುಬಾವ, ರಾಧಿಕಾ ಯಾದವ ಕೋಟ್ಯಾನ್, ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ, ಹರ್ಷ ರಾಜ ಶೆಟ್ಟಿ, ಯೋಗೀಶ ಕೋಟ್ಯಾನ್, ಮಾಜೀ ಸದಸ್ಯರಾದ ಉಮೇಶ್ ಮಾನಂಪಾಡಿ, ಮುಲ್ಕಿ ನಗರ ಪಂಚಾಯತ್ ಕಂದಾಯ ಅಧಿಕಾರಿ ಅಶೋಕ್, ಸಿಬ್ಬಂದಿ ಪ್ರಕಾಶ್, ಕಿಶೋರ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

04/11/2020 09:00 am

Cinque Terre

13.52 K

Cinque Terre

1

ಸಂಬಂಧಿತ ಸುದ್ದಿ