ಬೆಳ್ತಂಗಡಿ: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಯುಕ್ತ ಮುಂದಿನ ರೂಪರೇಷಗಳ ಕುರಿತು ಹೊಸದಿಲ್ಲಿಯಲ್ಲಿ ನವೆಂಬರ್ 10 ಮತ್ತು 11 ರಂದು ನಡೆಯಲಿರುವ ಸಮಾವೇಶದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 53 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಸಂದರ್ಭ ಡಾ. ಹೆಗ್ಗಡೆಯವರನ್ನು ಭೇಟಿ ಮಾಡಿ ಶುಭ ಕೋರಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ವಿಜಯದಶಮಿ ದಿನದಂದು ನಾವು ಪೂಜೆ ಮುಗಿಸಿಕೊಂಡು ದಿಲ್ಲಿಗೆ ಹೊರಡಲಿದ್ದೇವೆ ಎಂದರು.
ಶ್ರೀರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣ ಆಗುತ್ತಿದೆ. ಮುಂದಿನ ಕಾರ್ಯಗಳ ಕುರಿತು ದೇಶದಾದ್ಯಂತ ಅಭಿಯಾನ ಹೇಗೆ ನಡೆಸಬೇಕು ಎನ್ನುವ ಕುರಿತಾಗಿ ಸಮಾವೇಶ ನಡೆಯಲಿದೆ.
ಅದರಲ್ಲಿ ಪಾಲ್ಗೊಳ್ಳಲು ನಾವು ಇಂದು (ಶನಿವಾರ) ಹೊರಡುತ್ತಿದ್ದೇವೆ ಎಂದರು.
Kshetra Samachara
24/10/2020 10:33 pm