ಮುಲ್ಕಿ: ಹಿಂದೂ ಯುವಸೇನೆ ಮುಲ್ಕಿ ಘಟಕ ಹಾಗೂ ಮಹಿಳಾ ಮಂಡಳಿ ಆಶ್ರಯದಲ್ಲಿ 22 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ವಿಗ್ರಹ ವಿಸರ್ಜನೆ ಸರಳ ರೀತಿಯಲ್ಲಿ ನಡೆಯಿತು.
ಕೊರೊನಾದಿಂದಾಗಿ ಈ ಬಾರಿಯ ಶಾರದಾ ಮಹೋತ್ಸವದ ವಿಸರ್ಜನೆ ಶೋಭಾಯಾತ್ರೆಯಲ್ಲಿ ಚೆಂಡೆ ಸದ್ದು, ಗೊಂಬೆ ಕುಣಿತ, ಸ್ತಬ್ಧ ಚಿತ್ರ ಪ್ರದರ್ಶನವಿಲ್ಲದೆ ಮೆರವಣಿಗೆ ನಡೆಯಿತು. ಶೋಭಾಯಾತ್ರೆ ಶಿವಾಜಿ ಮಂಟಪದಿಂದ ಹೊರಟು ಮುಲ್ಕಿ ಬಸ್ ನಿಲ್ದಾಣದ ಮೂಲಕ ಕಟ್ಟದಂಗಡಿಯ ಶಾಂಭವಿ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು.
ಈ ಮೊದಲು ಶಾರದೆಗೆ ಪೂಜೆಯನ್ನು ಅರ್ಚಕ ಪ್ರಶಾಂತ್ ಭಟ್, ನೆರವೇರಿಸಿದರು. ಮುಲ್ಕಿ ನ. ಪಂ. ಮುಖ್ಯಾಧಿಕಾರಿ ಚಂದ್ರಪೂಜಾರಿ, ಸಿಬ್ಬಂದಿ ಪ್ರಕಾಶ್,ಮುಲ್ಕಿ ಎಸ್ಐ ವಿನಾಯಕ ತೋರಗಲ್, ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ಮುಲ್ಕಿ ಬಿಲ್ಲವ ಸಂಘದ ಕೋಶಾಧಿಕಾರಿ ಪ್ರಕಾಶ್ ಸುವರ್ಣ, ಮುಲ್ಕಿ ಹಿಂದೂ ಯುವಸೇನೆ ಅಧ್ಯಕ್ಷ ಅಶ್ವತ್ ಕೊಲಕಾಡಿ,ಪ್ರಧಾನ ಕಾರ್ಯದರ್ಶಿ ನಿತಿನ್ ದೇವಾಡಿಗ, ಕೋಶಾಧಿಕಾರಿ ಸತೀಶ್ ಬಂಗೇರ, ಮಹಿಳಾ ಮಂಡಳಿ ಅಧ್ಯಕ್ಷೆ ನೀರಜಾ ಅಗರ್ವಾಲ್, ಉಪಾಧ್ಯಕ್ಷೆ ಲತಾ ಶೇಖರ್, ಕಾರ್ಯದರ್ಶಿ ಸುಲತಾ, ಪದಾಧಿಕಾರಿಗಳಾದ ಉಮೇಶ್ ಮಾನಂಪಾಡಿ, ರಂಗ ಕೋಟ್ಯಾನ್, ಹರೀಶ್ ದೇವಾಡಿಗ, ಶಿವಶಂಕರ್ ಕೆಎಸ್ ರಾವ್ ನಗರ, ದೀಪಕ್ ಭಂಡಾರಿ, ಮಧುಕರ, ಸುರೇಶ್, ನಿಖಿಲ್ ಕೋಟ್ಯಾನ್, ದಿನೇಶ್ ಕೊಲ್ನಾಡು, ಶಂಕರ್ ಪಡ೦ಗ, ದಯಾನಂದ ಕಿಲ್ಪಾಡಿ, ಮತ್ತಿತರರು ಉಪಸ್ಥಿತರಿದ್ದರು. ಮುಲ್ಕಿ ಪೊಲೀಸರು ಹಾಗೂ ಸುರತ್ಕಲ್ ಟ್ರಾಫಿಕ್ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
Kshetra Samachara
21/10/2020 10:25 pm