ಕುಂದಾಪುರ : ಕರಾವಳಿ ಭಾಗ ಎಂದರೆ ಅದೊಂದು ವಿಶಿಷ್ಟ ಕಲೆಯನ್ನು ಒಳಗೊಂಡಂತಹ ಊರು, ಇಲ್ಲಿಯ ಜೀವ ಕಲೆ ಅಂದ್ರೆ ಅದು ಯಕ್ಷಗಾನ , ಅದೇ ರೀತಿ ಯಕ್ಷಗಾನಕ್ಕೆ ಪೂರಕವಾಗಿರುವ ಹೂವಿನಕೋಲು ಒಂದು ಪುರಾತನ ಶಿಷ್ಟ ಕಲೆಯಾಗಿದೆ.
ಇದು ಹೆಚ್ಚಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಗಳಲ್ಲಿ ಪ್ರಚಲಿತದಲ್ಲಿದೆ, ಇಂತಹ ಒಂದು ವೈಶಿಷ್ಟ ಪೂರ್ಣವಾದ ಕಲೆ ಇದೀಗ ಅಳಿವಿನಂಚಿನಲ್ಲಿರುವುದು ನೋವಿನ ಸಂಗತಿ.
ಸದ್ಯ ಈ ಕಲೆಗೆ ಪುನರ್ಜನ್ಮ ನೀಡಿರುವುದು ಐರೋಡಿ ಸದಾನಂದ ಹೆಬ್ಬಾರರು 1999 ಅಕ್ಟೋಬರ್ ತಿಂಗಳ ನವರಾತ್ರಿಯಂದು ಹೂವಿನಕೋಲು ಕಲೆಗೆ ಚಾಲನೆ ನೀಡುವುದರ ಮೂಲಕ ಮರು ಜನ್ಮವನ್ನು ನೀಡಿದರು.
ಈ ಹೂವಿನ ಕೋಲಿನಲ್ಲಿ ಹಾಡುಗಾರಿಕೆ ಮತ್ತು ಅರ್ಥಗಾರಿಕೆ ಇದರ ಪ್ರಧಾನ ಅಂಶಗಳು.
ಇದರಲ್ಲಿ ಭಾಗವತರೊಂದಿಗೆ ಮಕ್ಕಳು ಪ್ರದರ್ಶನ ನೀಡುವರು ಇದು ಯಕ್ಷಗಾನದಂತೆ ಪರಿಪೂರ್ಣ ಕಲಾಪ್ರಕಾರರವಲ್ಲ ಆದರೆ ಯಕ್ಷಗಾನದ ಪೂರಕ ಕಲೆಯಾಗಿದೆ. ಮರುಜನ್ಮ ಪಡೆದು ಕೇವಲ ಸ್ಪರ್ಧೆಗೆ ಸೀಮಿತವಾಗಿದ್ದ ಈ ಕಲೆಯನ್ನ ಮನೆಮನೆಗಳಲ್ಲಿ ಪ್ರದರ್ಶನ ಕೊಡುವುದರ ಮೂಲಕ ಈ ಕಲೆಗೆ ಹೊಸ ಮೆರುಗು ತಂದು ಕೊಟ್ಟದ್ದು ತೆಕ್ಕಟ್ಟೆಯ ಯಶಸ್ವಿ ಕಲಾವೃಂದ.
ಆದರೆ ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗ ಇರುವುದರಿಂದ ಮನೆ ಮನೆಗಳಿಗೆ ಹೋಗಿ ಪ್ರದರ್ಶನ ನೀಡುವುದು ಸಾಧ್ಯವಾಗುತ್ತಿಲ್ಲ. ಪ್ರತಿವರ್ಷ ನವರಾತ್ರಿಯ ಒಂಬತ್ತು ದಿನಗಳ ಕಾಲ ಹೂವಿನ ಕೋಲಿನ ಪ್ರದರ್ಶನವನ್ನ ನೀಡುತ್ತಿದ್ದ ತಂಡ ಇದೀಗ ಆನ್ ಲೈನ್ ಮೂಲಕ ಪ್ರದರ್ಶನ ನೀಡಿ ಆಕರ್ಷಣೆ ಮಾಡಿದೆ.
Kshetra Samachara
20/10/2020 12:37 pm