ಮುಲ್ಕಿ: ಕಿನ್ನಿಗೋಳಿ ಬಸ್ ನಿಲ್ದಾಣದಿಂದ ಗೋಳಿಜೋರ ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಎಡಬದಿಗೆ ತಿರುಗುವ ಜೋಡಿ ಬೈಲ್ - ಬಾಬಾಕೋಡಿ ರಸ್ತೆಯಲ್ಲಿ 80 ಮೀ. ಅಂತರದಲ್ಲಿ ರಸ್ತೆ ಎರಡು ಕವಲಾಗುತ್ತಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಹಾಯಕವಾಗಲು ಸ್ಥಳ ಸೂಚಕ ನಾಮಫಲಕ ಎರಡು ಕಡೆ ಅಳವಡಿಸಲಾಯಿತು.
ಈ ನಾಮಫಲಕ ಅನಾವರಣ ಕಾರ್ಯಕ್ರಮ ಜೆ.ಬಿ.ಫ್ರೆಂಡ್ಸ್ ಗೌರವಾಧ್ಯಕ್ಷ ವಿನ್ಸೆಂಟ್ ಡಿಕೋಸ್ತ ನೆರವೇರಿಸಿದರು. ಈ ಸಂದರ್ಭ ಕೋವಿಡ್ ಮುನ್ನೆಚ್ಚರಿಕೆ ಕರಪತ್ರ ಕೂಡ ಬಿಡುಗಡೆಗೊಳಿಸಿ ನಾಗರಿಕರಿಗೆ ವಿತರಿಸಿ ಕೊರೊನಾ ಜಾಗೃತಿ ಮೂಡಿಸಲಾಯಿತು.
ಜೆ.ಬಿ.ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಮಾತನಾಡಿ, ಕಳೆದ ಕೊರೊನಾ ಲಾಕ್ ಡೌನ್ ದಿನಗಳಿಂದ ಕಿನ್ನಿಗೋಳಿ ಜೆ.ಬಿ. ಫ್ರೆಂಡ್ಸ್ ಸದಸ್ಯರು ಕೊರೊನಾ ನಿರ್ಮೂಲನೆ ಬಗ್ಗೆ ಶ್ರಮ ವಹಿಸುತ್ತಿದ್ದು , ಶ್ರಮದಾನ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಜೆ.ಬಿ.ಫ್ರೆಂಡ್ಸ್ ಉಪಾಧ್ಯಕ್ಷ ಮೈಕಲ್ ಪಿಂಟೋ , ಸದಸ್ಯರಾದ ರೊನಾಲ್ಡ್ ಡಿಕೋಸ್ತ, ಸೈಮನ್ ಕ್ವಾಡ್ರಸ್, ರೋನ್ಸನ್ ಮೆಂಡೋನ್ಸ, ಗೋಪಾಲ್,. ರೋಲ್ಫಿ ಡಿಸೋಜ ಉಪಸ್ಥಿತರಿದ್ದರು. ಕಾರ್ಯದರ್ಶಿನಿಶಾನ್ ಕ್ವಾಡ್ರಸ್ ವಂದಿಸಿದರು.
Kshetra Samachara
11/10/2020 06:37 pm