ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಸೇತುವೆಯಿಂದ ಬಿದ್ದು ಸತ್ತಂತೆ ನಾಟಕವಾಡಿದ ಯುವಕ: ಈತನ ಪ್ಲ್ಯಾನ್ಗೆ ಪೊಲೀಸರೇ ಶಾಕ್!

ಮಲ್ಪೆ : ಐದು ದಿನಗಳ ಹಿಂದೆ ಮಲ್ಪೆ ಪಡುಕರೆ ಸೇತುವೆ ಬಳಿ ಬೈಕ್ ಇರಿಸಿ, ನೀರಿಗೆ ಬಿದ್ದು ಕಣ್ಮರೆಯಾದಂತೆ ನಾಟಕವಾಡಿದ್ದ, ದಾವಣಗೆರೆಯ ಶಿವಪ್ಪ ನಾಯ್ಕ ತನ್ನೂರಿನಲ್ಲಿಯೇ ಪತ್ತೆಯಾಗಿದ್ದಾನೆ. ಈತನ ನಾಟಕಕ್ಕೆ ಸ್ಥಳೀಯರು ಮುಳುಗು ತಜ್ಞರು ಮತ್ತು ಪೊಲೀಸರೇ ಬೆಸ್ತು ಬಿದ್ದ ಪ್ರಸಂಗ ನಿಜಕ್ಕೂ ರೋಚಕ.

ಸೆ.23 ರಂದು ಶಿವಪ್ಪ ನಾಯ್ಕ ಎಂಬ ಯುವಕನ ಬೈಕ್ ಮತ್ತು ಚಪ್ಪಲಿಯು ಪಡುಕೆರೆ ಸೇತುವೆ ಬಳಿ ಪತ್ತೆಯಾಗಿತ್ತು. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಹೊಳೆಯಲ್ಲಿ ಹುಡುಕಾಟ ಮಾಡಿದ್ದರು. ಆದರೆ ಶಿವಪ್ಪ ನಾಯ್ಕ್ ನ ದೇಹ ಪತ್ತೆಯಾಗಿರಲಿಲ್ಲ. ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿ, ಆತನ ಮೊಬೈಲ್ ಆನ್ ಮಾಡಿದಾಗ ಕುಂಜಿಬೆಟ್ಟಿನ ಬ್ಯಾಂಕಿನಿಂದ 24 ಸಾವಿರ ರೂ. ಡ್ರಾ ಮಾಡಿದ ಮಾಹಿತಿ ಪತ್ತೆಯಾಗಿದೆ. ಈ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಶಿವಪ್ಪ ನಾಯ್ಕ ದಾವಣಗೆರೆಯಲ್ಲಿರೋದು ಗೊತ್ತಾಗಿದೆ.

ಪ್ಲ್ಯಾನ್ ಹಿಂದೆ ಲವ್ ಸ್ಟೋರಿ!

ಈ ಅಸಾಮಿಯನ್ನು ಮಲ್ಪೆ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಿಸಿದಾಗ, ಕಟ್ಟಿಕೊಂಡವಳನ್ನು ಬಿಟ್ಟು ಇನ್ನೋರ್ವಳ ಜೊತೆ ಇರುವ ಲವ್ ಸ್ಟೋರಿ ಬೆಳಕಿಗೆ ಬಂದಿದೆ. 6 ತಿಂಗಳ ಹಿಂದೆ ದಾವಣಗೆರೆಯ ಆಶಾರನ್ನು ಪ್ರೀತಿಸಿ ಮದುವೆಯಾಗಿ ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಹೊರುವ ಕೆಲಸ ಮಾಡಿಕೊಂಡಿದ್ದ. ಅದೇ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹೊಸಪೇಟೆ ಹರಪ್ಪನಹಳ್ಳಿ‌ ಮೂಲದ ಕಮಲಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ. ಇದೇ ವಿಚಾರದಲ್ಲಿ ಗಂಡ ಹೆಂಡತಿಯೊಂದಿಗೆ ವೈಮನಸ್ಸು ಉಂಟಾಗಿ ಜಗಳಕ್ಕೂ ಕಾರಣವಾಗಿತ್ತು. ಇದೇ ವಿಚಾರವಾಗಿ ಸಾವಿನ ನಾಟಕವಾಡಲು ಪ್ಲ್ಯಾನ್ ಮಾಡಿದ್ದ. ಈತನಿಗಾಗಿ ಹೊಳೆಯಲ್ಲಿ ಶೋಧ ಮಾಡಿದವರು ಮತ್ತು ಪೊಲೀಸರು ಈಗ ತಲೆ ಚಚ್ಚಿಕೊಳ್ಳುವಂತಾಗಿದೆ.

Edited By : Nagesh Gaonkar
PublicNext

PublicNext

28/09/2022 02:35 pm

Cinque Terre

37.34 K

Cinque Terre

1

ಸಂಬಂಧಿತ ಸುದ್ದಿ