ಮಂಗಳೂರು: ನಗರದಲ್ಲಿ ನಿನ್ನೆ ರಾತ್ರೋರಾತ್ರಿ ಮಂಗಳೂರು ಪೊಲೀಸರು ದಾಳಿ ನಡೆಸಿ 10 ಮಂದಿ ಪಿಎಫ್ಐ ಮುಖಂಡರನ್ನು ಬಂಧಿಸಿದ್ದಾರೆ. ಮತ್ತೋರ್ವನು ಅನಾರೋಗ್ಯದಿಂದ ಬಳಲುತ್ತಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣ ಆತನನ್ನು ಬಂಧಿಸಲಾಗುತ್ತದೆ ಪೊಲೀಸರು ತಿಳಿಸಿದ್ದಾರೆ.
ಪಾಂಡೇಶ್ವರ ನಿವಾಸಿ ಮುಹಮ್ಮದ್ ಶರೀಫ್, ಮುಜೈರ್ ಕುದ್ರೋಳಿ, ಕುದ್ರೋಳಿ ನಿವಾಸಿ ಮುಹಮ್ಮದ್ ನೌಫಲ್ ಹಂಝ, ಕೆ.ಸಿ.ನಗರ ನಿವಾಸಿ ಶರೀಫ್ ಪಾಂಡೇಶ್ವರ, ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ನವಾಜ್ ಉಳ್ಳಾಲ, ಮುಹಮ್ಮದ್ ಇಕ್ಬಾಲ್ ಉಳಾಯಿಬೆಟ್ಟು, ಕೃಷ್ಣಾಪುರ ನಿವಾಸಿ ದಾವೂದ್ ನೌಶಾದ್ ಚೊಕ್ಕಬೆಟ್ಟು, ಬಜ್ಪೆ ನಿವಾಸಿ ಇಸ್ಮಾಯಿಲ್, ಕಿನ್ನಿಪದವು ನಿವಾಸಿ ನಝೀರ್, ಶಬೀರ್ ಅಹಮದ್, ಮುಂಡೇಲು ನಿವಾಸಿ ಇಬ್ರಾಹಿಂ ಮೂಡಬಿದಿರೆ ಬಂಧಿತ ಆರೋಪಿಗಳು.
ಪೊಲೀಸರು ಬಂಧಿಸಬೇಕಿದ್ದ ಮತ್ತೋರ್ವ ಪಿಎಫ್ಐ ಮುಖಂಡನ ಆರೋಗ್ಯ ಸಮಸ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಇಂದು ಆತನ ಬಂಧನವಾಗಿಲ್ಲ. ಆತ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಲಿದ್ದಾರೆ. ಇತ್ತೀಚೆಗೆ ಪಿಎಫ್ಐ ಕಚೇರಿ, ಮುಖಂಡರ ಮನೆ ಮೇಲೆ ಎನ್ಐಎ ದಾಳಿ ನಡೆಸಿತ್ತು.
ಇದನ್ನು ವಿರೋಧಿಸಿ ಹಲವಾರು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದ್ದರಿಂದ ಮುನ್ನೆಚ್ಚರಿಕಾ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮಂಗಳೂರು ಗ್ರಾಮಾಂತರ, ಮಂಗಳೂರು ಉತ್ತರ, ಉಳ್ಳಾಲ, ಬಜ್ಪೆ, ಸುರತ್ಕಲ್, ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ 10 ಮಂದಿ ಪಿಎಫ್ಐ ಮುಖಂಡರನ್ನು ಬಂಧಿಸಿದ್ದರು.
PublicNext
27/09/2022 09:03 pm