ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಮೊಬೈಲ್ ಅಂಗಡಿಗೆ ರೈನ್ ಕೋಟ್ ಧರಿಸಿ ನುಗ್ಗಿ ಕಳ್ಳತನ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ!

ಮಲ್ಪೆ : ಮಲ್ಪೆಯ ಬಸ್ ನಿಲ್ದಾಣ ಸಮೀಪದ ಕರಾವಳಿ ಮೊಬೈಲ್ ಅಂಗಡಿಗೆ ರಾತ್ರಿ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಮತ್ತಿತರ ವಸ್ತುಗಳನ್ನು ಕಳವುಗೈದಿದ್ದಾನೆ.

ಅಂಗಡಿಯ ಶಟರ್ನ ಲಾಕ್ ಅನ್ನು ಒಡೆದು ಒಳ ಪ್ರವೇಶಿಸಿದ್ದ ಕಳ್ಳ ರೈನ್ ಕೋಟ್ ಧರಿಸಿ ತನ್ನ ಕೈಚಳಕ ತೋರಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ!ಅಂಗಡಿಯಲ್ಲಿದ್ದ 7 ಮೊಬೈಲ್, ಹೆಡ್ಫೋನ್, ಬ್ಲೂಟೂತ್ ಮತ್ತು 10 ಸಾವಿರ ನಗದು ಕಳವುಗೈಯಲಾಗಿದೆ. ಕಳವಾದ ಸೊತ್ತಿನ ಮೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

26/09/2022 03:28 pm

Cinque Terre

24.16 K

Cinque Terre

0

ಸಂಬಂಧಿತ ಸುದ್ದಿ