ಉಡುಪಿ: ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ 11 ಮಂದಿ ಪಿ.ಎಫ್.ಐ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ಸಂಜೆ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಿದರೂ ಅಲ್ಲದೆ ಸಾರ್ವಜನಿಕ ರಸ್ತೆ ತಡೆದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಗರ ಕಲ್ಪನಾ ಟಾಕೀಸ್ ಬಳಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿದ ಪಿ.ಎಫ್.ಐ ಕಾರ್ಯಕರ್ತರು ರಸ್ತೆ ತಡೆ ಯತ್ನಿಸಿದಾಗ ಉಡುಪಿ ನಗರ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಸಾದಿಕ್ ಅಹಮ್ಮದ್, ಅಫ್ರೋಜ್ ಕೆ, ಇಲಿಯಾಸ್ ಸಾಹೇಬ್, ಇರ್ಷಾದ್ ಫಯಾಸ್ ಅಹಮ್ಮದ್, ಮಹಮ್ಮದ್ ಆಶ್ರಫ್, ಹಾರೂನ್ ರಶೀದ್, ಮಹಮ್ಮದ್ ಜುರೈಜ್, ಇಶಾಕ್ ಕಿದ್ವಾಯ್, ಶೌಖತ್ ಆಲಿ, ಮಹಮ್ಮದ್ ಜಹೀರ್ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
PublicNext
23/09/2022 12:22 pm