ಮಂಗಳೂರು: ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 25ವರ್ಷದ ಬಳಿಕ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಪಿರಿಯಾಪಟ್ಟಣದ ಆರನೆಹಳ್ಳಿಯಲ್ಲಿ ಬಂಧಿಸಿದ್ದಾರೆ.ಪಿರಿಯಾಪಟ್ಟಣದ ಆರನೆಹಳ್ಳಿ ನಿವಾಸಿ ಅಸ್ಲಾಂ ಪಾಷಾ ಬಂಧಿತ ಕಾರು ಕಳ್ಳ ಆರೋಪಿ ಅಸ್ಲಾಂ ಪಾಷಾ ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರ ನವೆಂಬರ್ 11ರಂದು ಅಂಬಾಸಿಡರ್ ಕಾರು ಕಳವು ಮಾಡಿದ್ದ.
ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಆರೋಪಿ 2000ದ ಫೆಬ್ರವರಿ 8ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ಗೈರು ಹಾಜರಾಗಿದ್ದ. ಅಲ್ಲದೆ 2015ರ ಮೇ 7ರಿಂದ ಈ ಪ್ರಕರಣ ಎಲ್ ಪಿಸಿ ಆಗಿತ್ತು. ಈ ಬಗ್ಗೆ ಪೊಲೀಸರು ಆರೋಪಿಯನ್ನು ಹುಡುಕಾಟ ನಡೆಸುತ್ತಿದ್ದರು.
ಆದರೆ ಆರೋಪಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಸೆಪ್ಟೆಂಬರ್ 12ರಂದು 25 ವರ್ಷದ ಬಳಿಕ ಪೊಲೀಸರು ಈತನನ್ನು ಪಿರಿಯಾಪಟ್ಟಣದ ಆರನೆಹಳ್ಳಿಯಲ್ಲಿ ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
Kshetra Samachara
13/09/2022 08:57 pm