ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದಲ್ಲಿ ಯುವತಿ ಮೇಲೆ ಕೈ ಹಾಕಿದ್ದಕ್ಕೆ ಸಾರ್ವಜನಿಕರು ಯುವಕನನ್ನು ಬಸ್ಸಿನಿಂದ ಇಳಿಸಿ ಗೂಸಾ ಇಕ್ಕಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಮಂಗಳೂರಿನಿಂದ ಮುಲ್ಕಿ ಕಡೆಗೆ ಬರುತ್ತಿದ್ದ ಸರ್ವಿಸ್ ಬಸ್ಸಿನಲ್ಲಿ ಉತ್ತರ ಪ್ರದೇಶದ ಮೂಲದ ಯುವಕ ಯುವತಿ ಮೇಲೆ ಕೈ ಹಾಕಿದ್ದು ಮುಲ್ಕಿ ಬಸ್ ನಿಲ್ದಾಣ ಸಮೀಪಿಸುತ್ತಿದಂತೆ ಯುವತಿ ತಮ್ಮ ಸಂಬಂಧಿಕರನ್ನು ಹಾಗೂ ಸ್ಥಳೀಯರನ್ನು ಕರೆದು ಯುವಕನ ಕೃತ್ಯ ತಿಳಿಸಿದ್ದಾಳೆ.
ಈ ಸಂದರ್ಭ ಸ್ಥಳೀಯರು ಆಕ್ರೋಶಿತರಾಗಿ ಯುವಕನನ್ನು ಹಿಗ್ಗಾ ಮಗ್ಗಾ ಥಳಿಸಿ ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಯುವಕ ಆಕಸ್ಮಿಕವಾಗಿ ಕೈತಾಗಿದೆ ಎಂದು ಹೇಳಿಕೆ ನೀಡಿ ತಪ್ಪೊಪ್ಪಿಗೆ ನೀಡಿದ್ದು ಪ್ರಕರಣ ರಾಜಿಯಲ್ಲಿ ಮುಗಿಸಲಾಗಿದೆ ಎಂದು ಮುಲ್ಕಿ ಪೊಲೀಸರು ತಿಳಿಸಿದ್ದಾರೆ.
Kshetra Samachara
29/08/2022 10:02 pm