ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪಾರ್ಟ್‌ ಮೆಂಟ್ ಮಹಡಿಯಿಂದ ಬಿದ್ದು ಬಾಲಕ ಸಾವು

ಪುತ್ತೂರು: ಪುತ್ತೂರಿನ ಬೊಳುವಾರಿನ ಅಪಾರ್ಟ್‌ ಮೆಂಟ್ ಒಂದರ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಬೊಳುವಾರು ಸಪರಿವಾರ ಶ್ರೀ ದುರ್ಗಾಪರಮೇಶ್ವರೀ ಮಲರಾಯ ದೇವಸ್ಥಾನದ ಕಮಿಟಿ ಅಧ್ಯಕ್ಷ ಮನೋಹರ್ ರೈ ಎಂಬವರ ಪುತ್ರ, ಸುದಾನ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ ಮೃತ ಬಾಲಕ.

ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ತೆರಳದೆ ಈತ ನೇರವಾಗಿ ವಸತಿ ಸಮುಚ್ಛಯಕ್ಕೆ ತೆರಳಿದ್ದು ಕೆಲವೇ ಸಮಯದಲ್ಲಿ ಸಮುಚ್ಚಯದ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ.

ಘಟನೆ ನಡೆದ ತಕ್ಷಣ ಅಲ್ಲಿದ್ದ ಸ್ಥಳೀಯರು ಸೇರಿ ಆತನನ್ನ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಗಂಭೀರ ಗಾಯಗೊಂಡಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದು ಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸೂಚಿಸಿದರು. ಅದರಂತೆ ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ರಾತ್ರಿ ವೇಳೆಗೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಯಾವತ್ತೂ ಅಪಾರ್ಟ್‌ಮೆಂಟ್ ಗೆ ತೆರಳದ ಆತ ಇಂದು ಯಾವ ಕಾರಣಕ್ಕೆ ಅಲ್ಲಿಗೆ ಹೋಗಿದ್ದಾನೆ ಎಂದು ತಿಳಿದು ಬಂದಿಲ್ಲ. ಅಲ್ಲದೆ ಆತ ಯಾವ ಮಹಡಿಯಿಂದ ಬಿದ್ದಿದ್ದಾನೆ ಎಂದೂ ತಿಳಿದುಬಂದಿಲ್ಲ. ಆದರೆ ಐದನೇ ಮಹಡಿಯಲ್ಲಿ ಆತ ತನ್ನ ಸ್ಕೂಲ್ ಬ್ಯಾಗ್ ಇರಿಸಿದ್ದು ತಿಳಿದುಬಂದಿದೆ.

ಮೃತ ವಿದ್ಯಾರ್ಥಿ ಸುಶಾನ್ ತಂದೆ ಮನೋಹರ ರೈ, ತಾಯಿ ಸುಧಾ ಹಾಗೂ ಸಹೋದರ ಸೊಹಾನ್ ರನ್ನು ಅಗಲಿದ್ದಾನೆ.

Edited By : PublicNext Desk
Kshetra Samachara

Kshetra Samachara

06/08/2022 07:19 am

Cinque Terre

5.22 K

Cinque Terre

0

ಸಂಬಂಧಿತ ಸುದ್ದಿ