ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ ಎನ್ಐಟಿಕೆ ಬೀಚ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದ ಆರೋಪಿ ಅರೆಸ್ಟ್

ಮಂಗಳೂರು: ನಗರದ ಎನ್ಐಟಿಕೆ ಬೀಚ್‌ನಲ್ಲಿ ಸಹಪಾಠಿಯೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಕಾಮುಕನೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಮೀನು ಲಾರಿ ಚಾಲಕ ಮುನಾಝ್ ಅಹ್ಮದ್ (30) ಬಂಧಿತ ಕಾಮುಕ. ಸಂತ್ರಸ್ತ ವಿದ್ಯಾರ್ಥಿನಿ ಜುಲೈ 27ರಂದು ನಗರದ ಎನ್‌ಐಟಿಕೆ ಬೀಚ್‌ಗೆ ತನ್ನ ಸ್ನೇಹಿತನೊಂದಿಗೆ ಬಂದಿದ್ದಳು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಮುನಾಝ್ ಅಹ್ಮದ್ ಆಕೆಯ ಸ್ನೇಹಿತನನ್ನು ಬೆದರಿಸಿ ಓಡಿಸಿದ್ದಾನೆ. ಆ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಅದನ್ನು ವಿಡಿಯೋ ಕೂಡಾ ಮಾಡಿದ್ದಾನೆ. ಆ ವಿಡಿಯೋ ತೋರಿಸಿ ಬೆದರಿಕೆಯೊಡ್ಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.

ಈ ಬಗ್ಗೆ ವಿದ್ಯಾರ್ಥಿನಿ ನೀಡಿರುವ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

01/08/2022 08:05 pm

Cinque Terre

9.52 K

Cinque Terre

0

ಸಂಬಂಧಿತ ಸುದ್ದಿ