ಬೈಂದೂರು: ತಾಲೂಕು ವ್ಯಾಪ್ತಿಯ ನಂದನವನದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನಿಗೆ ಚೂರಿಯಲ್ಲಿ ಇರಿಯಲಾಗಿದೆ.
ಪ್ರಸನ್ನ ಎಂಬಾತ ಇರಿತಕ್ಕೊಳಗಾದ ಯುವಕನಾಗಿದ್ದು, ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬುಧವಾರ ರಾತ್ರಿ ಸ್ನೇಹಿತ ಮನೋಜ್ ಖಾರ್ವಿ ಜೊತೆ ಊಟಕ್ಕೆ ಪ್ರಸನ್ನ ಊಟಕ್ಕೆಂದು ತೆರಳಿದ್ದರು. ಹೋಟೆಲ್ ಹೊರಗೆ ಇದ್ದ ಸುದರ್ಶನ ಹಾಗೂ ಯತೀಶ್ ಮತ್ತು ಪ್ರಸನ್ನ ನಡುವೆ ಯಾವುದೋ ವಿಷಯಕ್ಕೆ ಮಾತುಕತೆ, ವಾಗ್ವಾದ, ನಿಂದನೆ ನಡೆದಿದೆ. ಈ ವೇಳೆ ಸುದರ್ಶನ ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/07/2022 04:18 pm