ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಇನ್ಶೂರೆನ್ಸ್ ಹಣದಾಸೆಗೆ ಕಾರೊಳಗೆ ವ್ಯಕ್ತಿಯನ್ನು ಸುಟ್ಟರೇ?

ಕುಂದಾಪುರ: ಬೈಂದೂರು ತಾಲೂಕಿನ ಒತ್ತಿನೆಣೆಯಲ್ಲಿ ಇತ್ತೀಚೆಗೆ ಕಾರು ಸಮೇತ ವ್ಯಕ್ತಿಯನ್ನು ಸುಟ್ಟ ಪ್ರಕರಣ ರಾಜ್ಯದಲ್ಲೇ ಸಂಚಲನ ಉಂಟು ಮಾಡಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.ಆದರೆ ಪೊಲೀಸರು ತನಿಖೆಯ ಜಾಡು ಹಿಡಿದು ಹೊರಟಾಗ ಒಂದೊಂದೇ ರೋಚಕ ಸಂಗತಿಗಳು ಬಯಲಾಗುತ್ತಿವೆ.

ತಾಲೂಕಿನ ಒತ್ತಿನೆಣೆ ಸಮೀಪ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಕಾರ್ಕಳದ ಆನಂದ ದೇವಾಡಿಗ (60) ಅವರನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಬಂಧಿತ ಸಹೋದರರಾಗಿರುವ ಸತೀಶ್ ಹಾಗೂ ನಿತಿನ್ ಹಣದಾಸೆಗಾಗಿ ಸಹಕರಿಸಿದರೇ ಎನ್ನುವ ಗುಮಾನಿ ಪೊಲೀಸರದ್ದು.

ಆರೋಪಿ ನಂ.1 ಸದಾನಂದ ಶೇರೆಗಾರ್ ಹೆಣೆದ ಕೊಲೆ ಯೋಜನೆ ಪ್ರಕಾರ ಆತ ಕಾರಿನಲ್ಲಿ ಸಾವನ್ನಪ್ಪಿದ್ದು, ಅದಾದ ಬಳಿಕ ಆತನ ಹೆಸರಲ್ಲಿರುವ ಎಲ್‌ಐಸಿ ವಿಮೆ ಮೂಲಕ ಸಿಗುವ ಹಣವನ್ನು ಸದಾನಂದ, ಶಿಲ್ಪಾ ಜೊತೆಗೆ ಈ ಕೃತ್ಯಕ್ಕೆ ಸಹಕರಿಸಿದ ನಿತಿನ್ ಹಾಗೂ ಸತೀಶ್ ಹಂಚಿಕೊಳ್ಳಲು ನಿರ್ಧರಿಸಿದ್ದರು.

ಇನ್ಶೂರೆನ್ಸ್ ಹಣದಾಸೆಗಾಗಿಯೇ ಅವರು ಈ ಕೃತ್ಯಕ್ಕೆ ಸಹಕರಿಸಿದ್ದರು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ದಿನಕ್ಕೊಂದು ಸಂಗತಿ ಹೊರಬರುತ್ತಿದ್ದು, ಪೊಲೀಸರ ತನಿಖೆಯಿಂದಷ್ಟೇ ಪೂರ್ಣ ಸತ್ಯಾಂಶ ಹೊರಬಹುದು.

Edited By : Nagesh Gaonkar
PublicNext

PublicNext

18/07/2022 08:43 pm

Cinque Terre

61.83 K

Cinque Terre

0

ಸಂಬಂಧಿತ ಸುದ್ದಿ