ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಜಿಮಠ: ಕೋಣ ಹತ್ಯೆ-ಆರೋಪಿಗಳು ಪರಾರಿ

ಬಜಪೆ: ಮನೆಯೊಂದರಲ್ಲಿ ಆಕ್ರಮ ಕಸಾಯಿ ಖಾನೆ ಮಾಡಿಕೊಂಡು ಕೋಣವೊಂದನ್ನು ಆಕ್ರಮವಾಗಿ ಹತ್ಯೆಗೈದ ಘಟನೆ ಇಂದು ಗಂಜಿಮಠ ಎಂಬಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಬಜಪೆ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಕೋಣದ ಹತ್ಯೆಗೆ ಬಳಸಿದ್ದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಏಳೆಂಟು ವರ್ಷ ಪ್ರಾಯದ ಕೋಣದ ಮೌಲ್ಯ ಸುಮಾರು 50 ರಿಂದ 60 ಸಾವಿರ ರೂ ಎಂದು ಅಂದಾಜಿಸಲಾಗಿದೆ. ಬಕ್ರೀದ್ ಆಚರಣೆಯ ಹಿನ್ನಲೆಯಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ ಆರೋಪಿಗಳನ್ನು ಯೂಸುಫ್, ಹಕೀಂ ಹಾಗೂ ಸೀರಾಜ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

10/07/2022 07:25 pm

Cinque Terre

10.71 K

Cinque Terre

0

ಸಂಬಂಧಿತ ಸುದ್ದಿ