ಮಣಿಪಾಲ:ಮಣಿಪಾಲದ ಹೋಟೆಲ್‌ನಲ್ಲಿ ಆಟಿಕೆ ಪಿಸ್ತೂಲು ತೋರಿಸಿ, ಬಿಲ್ ಕೊಡದೆ ಪರಾರಿಯಾಗಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಮೂಲದ ಮೊಹಮ್ಮದ್ ಅನ್ವರ್ ಬಂಧಿತ ಆರೋಪಿ, ಈತ ಎರಡು ದಿನಗಳ ಹಿಂದೆ ಮಣಿಪಾಲದಲ್ಲಿರುವ ಹಬೀಬುಲ್ಲಾ ಎಂಬುವರ ಹೋಟೆಲಿಗೆ ಕಾರಿನಲ್ಲಿ ಬಂದು ತಿಂಡಿ ತಿಂದು, ಚಹಾ ಕುಡಿದು ಬಿಲ್ ಪಾವತಿಸದೆ ತೆರಳಿದ್ದ. ಈ ಸಂದರ್ಭ ಹಣ ಕೇಳಲು ಕಾರಿನ ಬಳಿ ತೆರಳಿದ ಹಬೀಬುಲ್ಲಾ ಅವರಿಗೆ ಆಟಿಕೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು.ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Kshetra Samachara
07/07/2022 02:36 pm