ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಟ್ ಫಂಡ್ ಹಣ ಮರಳಿಸದೆ ದೋಖ : ಹಣ ಕೇಳಿ ಕೇಳಿ ಸುಸ್ತಾಗಿ ವೃದ್ಧ ಆತ್ಮಹತ್ಯೆ

ಉಳ್ಳಾಲ: ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ವೃದ್ಧರೋರ್ವರಿಗೆ ಇಬ್ಬರು ಚಿಟ್ ಫಂಡ್ನ ಹಣ ಮರಳಿಸದೆ ಮೋಸ ಮಾಡಿದ್ದು,ಹಣ ಕೇಳಿ ಸುಸ್ತಾದ ವೃದ್ಧ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಮಾಡೂರು ಶಾಲೆ ಬಳಿ ನಡೆದಿದೆ.

ಕೋಟೆಕಾರು ಗ್ರಾಮದ ಮಾಡೂರು ಸರಕಾರಿ ಶಾಲೆಯ ಬಳಿಯ ನಿವಾಸಿ ಜಯರಾಮ ಶೆಟ್ಟಿ(71) ಆತ್ಮಹತ್ಯೆಗೈದ ದುರ್ದೈವಿ.ಜಯರಾಮ್ ಅವರು ಇಂದು ಬೆಳಿಗ್ಗೆ ಮನೆಯ ಕೋಣೆಯೊಳಗೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಪತ್ನಿ ಲೀನಾ ಜೆ ಶೆಟ್ಟಿ ಅವರು ಬೆಳಿಗ್ಗೆ ಚಹಾ ಕೊಡಲೆಂದು ಹೋಗುವಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಯರಾಮ್ ಶೆಟ್ಟಿ ಅವರು ಮಾಡೂರು ಬಸ್ಸು ತಂಗುದಾಣದ ಬಳಿಯ ಪಂಚಾಯತ್ ಕಟ್ಟಡದ ಅಂಗಡಿಯಲ್ಲಿ ಸೀಯಾಳ ವ್ಯಾಪಾರಿಯಾಗಿದ್ದು ,ಚಿಟ್ ಫಂಡ್ ವ್ಯವಹಾರನೂ ನಡೆಸುತ್ತಿದ್ದರಂತೆ.ಕೊಟ್ಟವನು ಕೋಡಂಗಿ ,ಇಸ್ಕೊಂಡವನು ವೀರಭದ್ರ ಎಂಬಂತೆ ಜಯರಾಮ್ ಶೆಟ್ಟಿ ಅವರ ಚಿಟ್ ಫಂಡ್ ನ ಹಣ ಇಸ್ಕೊಂಡವರು ಹಣ ಮರಳಿಸದೆ ಮೋಸ ಮಾಡಿದ್ದರಂತೆ.ಇದರಿಂದ ಜಯರಾಮ್ ಶೆಟ್ಟಿ ಅವರು ತೀರ ನಷ್ಟ ಅನುಭವಿಸಿದ್ದು ಅದರ ಚಿಂತೆಯಲ್ಲೇ ನೇಣು ಬಿಗಿದು ಆತ್ಮ ಹತ್ಯೆಗೈದಿರುವುದಾಗಿ ಅವರ ಪತ್ನಿ ಲೀನಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಜಯರಾಮ್ ಅವರ ಪತ್ನಿ ಲೀನಾ ಜೆ ಶೆಟ್ಟಿ ಅವರು ಕೋಟೆಕಾರು ಪಂಚಾಯತ್ನ ಮಾಜಿ ಸದಸ್ಯರಾಗಿದ್ದಾರೆ.ಮೃತ ಜಯರಾಮ್ ಅವರು ಪತ್ನಿ,ಮೂರು ಪುತ್ರಿಯರು,ಮೊಮ್ಮಕ್ಕಳನ್ನ ಅಗಲಿದ್ದಾರೆ. ಮೃತದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದು ಪ್ರಕರಣ ದಾಖಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/06/2022 02:23 pm

Cinque Terre

8.08 K

Cinque Terre

0

ಸಂಬಂಧಿತ ಸುದ್ದಿ