ಉಡುಪಿ: ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ 76 ಬಡಗುಬೆಟ್ಟು ಗ್ರಾಮದ ಬೈಲೂರಿನ ವಾಸುಕಿನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಣಿವಣ್ಣನ್ ಎಂಬವರ ಪುತ್ರ ಸುಮೇಶ್ ಎಮ್ (33) ಎಂದು ಗುರುತಿಸಲಾಗಿದೆ. ಜೀವನದಲ್ಲಿ ಜಿಗುಪ್ಸೆಯೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಎ.ಎಸ್.ಐ ನಾರಾಯಣ ಬಿ, ತನಿಖಾ ಸಹಾಯಕ ವಿಶ್ವನಾಥ ಶೆಟ್ಟಿ ಅಮಾಸೆಬೈಲು ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ವೈದ್ಯಕೀಯ ಪರೀಕ್ಷೆಗೆ ಶವ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು.
Kshetra Samachara
04/06/2022 02:21 pm