ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಕಡೆಯಿಂದ ಎಂಆರ್ಪಿಎಲ್ ಕಡೆಗೆ ಹೋಗುತ್ತಿದ್ದ 16 ಚಕ್ರಗಳ ಟ್ರಕ್ ನ್ನು ಅದರ ಚಾಲಕ ಕುಡಿದ ಮತ್ತಿನಲ್ಲಿ ಅತೀವೇಗವಾಗಿ ಯದ್ವಾತದ್ವ ಚಲಾಯಿಸಿಕೊಂಡು ಬಂದು ಕಾರು, ಬೈಕ್ ಹಾಗೂ ರಿಕ್ಷಾ ವೊಂದಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿದ್ದ ಚಾಲಕ ಕೈಲಾಶ್ ಪಾಟೀಲ್ (42) ನನ್ನು ಬಂಧಿಸಲಾಗಿದೆ. ಕ್ಲೀನರ್ ಪರಾರಿಯಾಗಿದ್ದಾನೆ.
ಸುರತ್ಕಲ್ ಜಂಕ್ಷನ್ನಲ್ಲಿ ದ್ವಿಚಕ್ರ ಸವಾರನಿಗೆ ಢಿಕ್ಕಿ ಹೊಡೆದು ಬಳಿಕ ಪೊಲೀಸ್ ಪಟ್ರೋಲ್ ವಾಹನಕ್ಕೆ ಗುದ್ದಿದ್ದಾನೆ. ಈ ವೇಳೆ ಲಾರಿ ನಿಲ್ಲಿಸದೆ ಕಾನದತ್ತ ಪಲಾಯನವಾಗುವ ಸಂದರ್ಭ ಸುರತ್ಕಲ್ ರೈಲ್ವೇ ಬ್ರಿಡ್ಜ್ ಬಳಿ ರಿಕ್ಷಾಕ್ಕೆ ಢಿಕ್ಕಿ ಹೊಡೆಸಿದ್ದಾನೆ ಪರಿಣಾಮ ರಿಕ್ಷಾ ಪಲ್ಟಿಯಾಗಿ ಮೂವರಿಗೆ ಗಾಯವಾಗಿತ್ತು. ಇದಕ್ಕೂ ಮುನ್ನ ಬೈಕಂಪಾಡಿ ಹಾಗೂ ಸುರತ್ಕಲ್ ಬಸ್ ನಿಲ್ದಾಣದ ಬಳಿ ಕಾರಿಗೆ ಢಿಕ್ಕಿ ಹೊಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
Kshetra Samachara
02/06/2022 10:57 pm