ಬಂಟ್ವಾಳ: ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಬಂಟ್ವಾಳದ ಪಾಣೆಮಂಗಳೂರಿನಲ್ಲಿ ನಡೆದಿದೆ.
ನರಿಕೊಂಬು ಗ್ರಾಮದ ಭಾಗೀರಥಿಕೋಡಿ ನಿವಾಸಿ ಮೋನಪ್ಪ (63) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಬೆಳಗ್ಗೆ ತನ್ನ ದ್ವಿಚಕ್ರ ವಾಹನದಲ್ಲಿ ಪಾಣೆಮಂಗಳೂರಿಗೆ ಬಂದಿದ್ದ ಮೋನಪ್ಪ ಅವರು ದಿನಸಿ ಅಂಗಡಿಗೆ ಬಂದು ಸಾಮಾನು ಕಟ್ಟಿಡುವಂತೆ ತಿಳಿಸಿ ಅಲ್ಲಿಂದ ಮೀನು ಮಾರುಕಟ್ಟೆಯತ್ತ ಬಂದು ತನ್ನ ದ್ವಿಚಕ್ರವಾಹನವನ್ನು ಅಲ್ಲೆ ಬಿಟ್ಟು ಪಾಣೆಮಂಗಳೂರು ಹಳೇ ಸೇತುವೆಯಿಂದ ನದಿಗೆ ಹಾರಿರುವುದಾಗಿ ತಿಳಿದು ಬಂದಿದೆ.
ತಕ್ಷಣ ಸ್ಥಳೀಯ ಈಜುಗಾರರು ದೋಣಿಯ ಮೂಲಕ ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದರಾದರೂ ಅವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಬಂಟ್ವಾಳ ಸಮುದಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/06/2022 10:56 pm