ಬಂಟ್ವಾಳ: ಬೆಳ್ತಂಗಡಿಯಿಂದ ಬಂಟ್ವಾಳದ ಅರಳದಲ್ಲಿರುವ ತನ್ನ ತಾಯಿ ಮನೆಯಿಂದ ಅಜ್ಜಿ ಮನೆಗೆ ಇಬ್ಬರು ಮಕ್ಕಳೊಂದಿಗೆ ತೆರಳಿದ್ದ ಆಶಾಲತಾ (25) ಎಂಬ ಮಹಿಳೆ ನಾಪತ್ತೆಯಾಗಿದ್ದಾರೆ. ಸಜಿಪದ ನಗ್ರಿಯಲ್ಲಿರುವ ಅಜ್ಜಿ ಮನೆಗೆ ತೆರಳುವುದಾಗಿ ಹೋದವರು ನಾಪತ್ತೆಯಾಗಿರುವುದಾಗಿ ಬಂಟ್ವಾಳ ಪೊಲೀಸರಿಗೆ ದೂರು ನೀಡಲಾಗಿದೆ.
ಆಶಾಲತಾ ಮೇ 7ರಂದು ಮಕ್ಕಳಾದ ಮಾನ್ಯಾ, ಅಕೇಶ್ ಜೊತೆ ಬೆಳ್ತಂಗಡಿಯಿಂದ ಅರಳದಲ್ಲಿರುವ ತಾಯಿ ಮನೆಗೆ ಬಂದಿದ್ದರು. 14ರಂದು ಬೆಳಗ್ಗೆ 11.30ಕ್ಕೆ ಬಾಡಿಗೆ ಆಟೊದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಜ್ಜಿ ಮನೆಗೆ ತೆರಳಿದ್ದಾರೆ. ಆಟೊ ನಗ್ರಿ ತಲುಪುತ್ತಿದ್ದಂತೆ ಆಶಾಲತಾ ಅವರು ತನ್ನ ತಾಯಿ ಮತ್ತು ಪುತ್ರಿಯನ್ನು ಮತ್ತೆ ಅರಳಕ್ಕೆ ಹೋಗುವಂತೆ ಹೇಳಿ ಮಗನೊಂದಿಗೆ ಇಳಿದು, ತಾನು ಅಜ್ಜಿ ಮನೆಗೆ ನಡೆದುಕೊಂಡು ಹೋಗುವುದಾಗಿ ಹೇಳಿ ಅವರನ್ನು ಕಳಿಸಿದ್ದಾರೆ. ಇದನ್ನು ಅಂದು ಸಂಜೆ ಆಕೆಯ ತಾಯಿ ತನ್ನ ಪತಿಯೊಂದಿಗೆ ತಿಳಿಸಿದ್ದು, ಅದರಂತೆ ವಿಚಾರಿಸಿದಾಗ ಆಕೆ ಮನೆಗೆ ಬಂದಿಲ್ಲ ಎಂದು ಅಜ್ಜಿ ಮನೆಯವರು ತಿಳಿಸಿದ್ದಾರೆ. ಅದರಂತೆ ಪುತ್ರಿ ಮತ್ತು ಮೊಮ್ಮಗ ನಾಪತ್ತೆ ಆಗಿದ್ದಾರೆ ಎಂದು ಮೋನಪ್ಪ ಸಪಲ್ಯ ಎಂಬವರು ದೂರು ನೀಡಿದ್ದಾರೆ.
Kshetra Samachara
19/05/2022 10:48 am