ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಪೊಲೀಸರ ಕೈಸೇರಿದ ಪ್ರಾಥಮಿಕ ವರದಿ

ಉಡುಪಿ: ತೀವ್ರ ಸಂಚಲನ ಮೂಡಿಸಿ ,ಈಶ್ವರಪ್ಪ ಮಂತ್ರಿಸ್ಥಾನಕ್ಕೆ ಉರುಳಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ವರದಿ ಪೊಲೀಸರ ಕೈಸೇರಿದೆ.ಕೆಎಂಸಿ ಮಣಿಪಾಲದ ವೈದ್ಯರು ಮರಣೋತ್ತರ ಪರೀಕ್ಷಾ ವರದಿ ನೀಡಿದ್ದರೂಸಾವಿಗೆ ಕಾರಣ ತಿಳಿಸಿಲ್ಲ. ಮಣಿಪಾಲ ಕೆಎಂಸಿ ವೈದ್ಯರು ಮತ್ತು ಕೆಎಂಸಿ ಫೋರೆನ್ಸಿಕ್ಸ್ ಲ್ಯಾಬ್ ವಿಭಾಗದಿಂದ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು ಅದರಲ್ಲಿ Cause of death ಕಾಯ್ದಿರಿಸಲಾಗಿದೆ.

ರಕ್ತ, ಶ್ವಾಸಕೋಶ, ಕಿಡ್ನಿ, ಚರ್ಮದ ಪರೀಕ್ಷೆ ವರದಿ ಬಾಕಿ ಇದ್ದು , ಎಫ್ ಎಸ್ ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ದೇಹದ ಒಳಾಂಗಗಳ ಪರೀಕ್ಷಾ ವರದಿ ಬಂದ ಮೇಲೆ ಅಂತಿಮ ಮರಣೋತ್ತರ ಪರೀಕ್ಷೆ ಬರಲಿದೆ.ಬಳಿಕವಷ್ಟೇ ಪೊಲೀಸರು ಮರಣೋತ್ತರ ಪರೀಕ್ಷೆ ಮತ್ತು ಎಫ್ ಎಸ್ ಎಲ್ ಜೊತೆ ಹೋಲಿಕೆ ಮಾಡಿ ನೋಡಲಿದ್ದಾರೆ.

Edited By : Nagaraj Tulugeri
PublicNext

PublicNext

20/04/2022 12:41 pm

Cinque Terre

23.74 K

Cinque Terre

8

ಸಂಬಂಧಿತ ಸುದ್ದಿ