ವಿಶೇಷ ವರದಿ
ಉಡುಪಿ: ವಡ್ಡರ್ಸೆ ಸಮೀಪದ ಬನ್ನಾಡಿ ಎಂಬಲ್ಲಿರುವ ಒಂದು ಜಾಗ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಹಲವಾರು ವರ್ಷದಿಂದ ವಡ್ಡರ್ಸೆ ಹಾಗೂ ಬನ್ನಾಡಿಯಲ್ಲಿ ಸ್ಮಶಾನವಾಗಬೇಕು ಎನ್ನುವ ಕೂಗು ಕೇಳಿಬಂದಿತ್ತು. ಅದಕ್ಕೆ ಸರ್ಕಾರವು ಒಪ್ಪಿಗೆ ನೀಡಿದ್ದು ಇದೀಗ ಸ್ಮಶಾನಕ್ಕಾಗಿ ಆಯ್ಕೆ ಮಾಡಿದ ಜಾಗ ಪುರಾತತ್ವ ಇಲಾಖೆ ಅಡಿಯಲ್ಲಿ ಬರುತ್ತೆ ಆ ಜಾಗ ಹಿಂದಿನ ಕಾಲದಲ್ಲಿ ರಾಜರು ಆಳಿದ ಜಾಗವೆಂದು ಕೆಲವರು ವಾದಿಸಿದರೆ ಇನ್ನೂ ಕೆಲವರು ಈ ಜಾಗದಲ್ಲಿ ರಾಜರು ಆಳಿದ ಪುರಾವೆಗಳು ಇಲ್ಲಾ ಎಂದು ಪ್ರಸ್ತಾಪಿಸಿದ್ದಾರೆ.
ಒಟ್ಟಾರೆ ಈ ಜಾಗ ಗೊಂದಲದ ಗೂಡಾಗಿದ್ದು ಸಬಂಧಿಸಿದ ಮೇಲಾಧಿಕಾರಿಗಳು ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ನೀಡಬೇಕಿದೆ.
Kshetra Samachara
12/04/2022 07:58 am