ಬಂಟ್ವಾಳ: ಆಟೊರಿಕ್ಷಾದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸರು, ಆರೋಪಿ ಸಹಿತ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿತು. ಸಜೀಪ ನಡು ಗ್ರಾಮದ ಕಂಚಿನಡ್ಕಪದವು ನಿವಾಸಿ ಸಿದ್ದೀಕ್ ಯಾನೆ ಕೋಳಿ ಸಿದ್ದೀಕ್ ( 36) ಬಂಧಿತ ಆರೋಪಿ.
ಈತನಿಂದ 2 ಸಾವಿರ ರೂ ಮೌಲ್ಯದ ಗಾಂಜಾ, 60 ಸಾವಿರ ರೂ ಮೌಲ್ಯದ ರಿಕ್ಷಾ 1,260 ರೂ ನಗದು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಜೀಪಮೂಡ ಗ್ರಾಮದ ಬೇಂಕ್ಯ ಸಮೀಪದ ಬರ್ಕೆ ಎಂಬಲ್ಲಿ ಆರೋಪಿ ಗಾಂಜಾ ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿ ಬರ್ಕೆ ಎಂಬಲ್ಲಿ ರಿಕ್ಷಾದಲ್ಲಿ ಗಾಂಜಾ ದಾಸ್ತಾನು ಇರಿಸಿ ಮಾರಾಟ ಕ್ಕಾಗಿ ನಿಂತಿದ್ದ. ಪೋಲೀಸರು ಜೀಪ್ ನಲ್ಲಿ ಬರುವುದನ್ನು ಗಮನಿಸಿ ರಿಕ್ಷಾ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ದಾಗ ಆತನ ರಿಕ್ಷಾದಲ್ಲಿ ಇರಿಸಲಾಗಿದ್ದ ಗಾಂಜದ ಬಗ್ಗೆ ಮಾಹಿತಿ ನೀಡಿದ್ದಾನೆ.ಅಲ್ಲದೆ ಉಪ್ಪಳ ಕಡೆಯಿಂದ ಗಾಂಜಾನವನ್ನು ತಂದು ಪ್ಯಾಕೆಟ್ ಗಳನ್ನಾಗಿ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುವ ಬಗ್ಗೆ ಆತ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ. ಆರೋಪಿಯನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Kshetra Samachara
30/03/2022 10:04 pm