ಬೈಂದೂರು : ಕೊಲ್ಲೂರು ಠಾಣಾ ವ್ಯಾಪ್ತಿಯ ಯಲ್ಲಿ 26/3/2022 ರಂದು ರಾತ್ರಿ 11.00 ಗಂಟೆಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಳಿ ಯಕ್ಷಗಾನ ನೋಡಲು ಹೋದ ತುಕಾರಾಮ ಶೆಟ್ಟಿಗಾರ್ (52 ವರ್ಷ) ಮನೆಗೆ ಮರಳಿ ಬಂದಿರುವುದಿಲ್ಲ ಎಂದು ಅವರ ಪತ್ನಿ ಜಯಂತಿ ಠಾಣೆಗೆ ಬಂದು ದೂರು ನೀಡಿದ್ದಾರೆ.
ತುಕಾರಾಮ ಶೆಟ್ಟಿಗಾರ್ ಕಳೆದ 21 ವರ್ಷದಿಂದ ಮಾನಸಿಕ ಕಾಯಿಲೆ ಯಿಂ ದ ಬಳಲುತ್ತಿದ್ದು, ಕಳೆದ 8 ದಿನದಿಂದ ಮಾತ್ರೆಗಳು ಖಾಲಿ ಆಗಿದೆ. ಕೊಲ್ಲೂರು ಗ್ರಾಮದ ಮೇಘನಿ ಅರಣ್ಯ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ದೊರೆತು ಪೋಲಿಸ್ ಇಲಾಖೆ ಮತ್ತು ಕುಟುಂಬದವರ ಜೊತೆ ಅಲ್ಲಿ ಹುಡುಕಾಡಿದ್ದು ಅಲ್ಲಿ ಸಿಗದ ಕಾರಣ ಕೊಲ್ಲೂರು ಠಾಣೆಗೆ ಬಂದು ದೂರು ದಾಖಲಾಗಿರುತ್ತದೆ .
ತುಕಾರಾಮ ಶೆಟ್ಟಿಗಾರ್ ಇವರ ಚಹರೆ. ಎತ್ತರ 5 ಆಡಿ 2 ಇಂಚು, ಚಪ್ಪಟೆ ಮುಖ. ಸಾಧಾರಣ ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು, ತಲೆಯ ಹಿಂಬದಿ ಉದ್ದ ಕೂದಲು ಇರುತ್ತದೆ. ಎದೆಯಲ್ಲಿ ಕಪ್ಪು ಮಚ್ಚೆ ಇರುತ್ತದೆ.
.ಕನ್ನಡ ,ತುಳು ಮಲಯಾಳಿ ಭಾಷೆ ಮಾತನಾಡುತ್ತಾರೆ. ಕಾಣೆಯಾದ ತುಕಾರಾಮ ಶೆಟ್ಟಿಗಾರ್ ಮಾಹಿತಿ ಇದ್ದಲ್ಲಿ ತಕ್ಷಣ ಕೊಲ್ಲೂರು ಪೊಲೀಸ್ ಸ್ಟೇಷನ್ ಈ ಫೋನ್ ನಂಬರಿಗೆ ಸಂಪರ್ಕಿಸಬೇಕಾಗಿ 08254258233, 9480805460, ತಿಳಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
Kshetra Samachara
30/03/2022 02:42 pm