ಮಂಗಳೂರು: ಟೆಂಪೋವನ್ನು ಅಡ್ಡಗಟ್ಟಿ ಮೀನು ವ್ಯಾಪಾರಿಯ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಎರಡೂವರೆ ಲಕ್ಷ ರೂಪಾಯಿ ಹಣ ದೋಚಿದ ಘಟನೆ ಮಂಗಳೂರು ನಗರದ ರಾಷ್ಡ್ರೀಯ ಹೆದ್ದಾರಿ 66 ರ ಆಡಂಕುದ್ರು ಎಂಬಲ್ಲಿ ನಡೆದಿದೆ.
ಮೀನಿನ ವ್ಯಾಪಾರಿ ಮುಸ್ತಫಾ(47), ಹಲ್ಲೆಗೊಳಗಾದವರು. ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮುಸ್ತಫಾರು ಎಂದಿನಂತೆ ಇಂದು ತನ್ನ ಟೆಂಪೊದಲ್ಲಿ ದಕ್ಕೆಗೆ ಮೀನು ಖರೀದಿಸಲೆಂದು ಹೊರಟಿದ್ದರು. ಜೊತೆಗೆ ಮಾಸ್ತಿಕಟ್ಟೆಯ ಮೂಸ ಎಂಬುವವರು ಕೂಡಾ ಇದ್ದರು. ಟೆಂಪೊ ಆಡಂಕುದ್ರು ತಲುಪುತ್ತಿದ್ದಂತೆಯೇ ಹಿಂದಿನಿಂದ ಧಾವಿಸಿ ಬಂದ ಕೆಂಪು ಬಣ್ಣದ ಕಾರೊಂದು ಟೆಂಪೊವನ್ನು ಅಡ್ಡಗಟ್ಟಿದೆ. ಕಾರಿನಲ್ಲಿದ್ದ ಮೂವರು ಮುಸಕುಧಾರಿಗಳ ಪೈಕಿ ಇಬ್ಬರು ಕೆಳಗಿಳಿದು ಹಣದ ಬ್ಯಾಗ್ ನೀಡುವಂತೆ ಬೆದರಿಸಿದರು. ಕೊಡಲು ನಿರಾಕರಿಸಿದ ಮುಸ್ತಫಾ ಟೆಂಪೊದಿಂದ ಕೆಳಗಿಳಿಯಲು ಮುಂದಾದಾಗ ದುಷ್ಕರ್ಮಿಗಳು ಅವರತ್ತ ತಲವಾರು ಬೀಸಿದ್ದಾರೆ. ಆಗ ಕೈಯಿಂದ ತಲವಾರನ್ನು ತಡೆದಾಗ ಎರಡೂ ಕೈಗಳಿಗೂ ಗಾಯಗಳಾಗಿವೆ. ಇದೇ ಸಂದರ್ಭ ಮುಸ್ತಫಾರಲ್ಲಿದ್ದ 2 ಲಕ್ಷ 15 ಸಾವಿರ ರೂಪಾಯಿಗಳನ್ನ ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ.
ಗಾಯಾಳು ಮುಸ್ತಫಾರಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Kshetra Samachara
05/03/2022 11:15 pm