ಸುಳ್ಯ: ಇಲ್ಲಿನ ಪೈಚಾರು ದೊಡ್ಡೇರಿ ಬಳಿ ಹೊಳೆಯಲ್ಲಿ ಮುಳುಗಿ 6ರ ಹರೆಯದ ಬಾಲಕ ಮೃತ ಪಟ್ಟಿದ್ದಾನೆ. ಆಂಧ್ರ ಮೂಲದ ಕುಟುಂಬ ಇಲ್ಲಿಯೇ ಸಮೀಪದಲ್ಲಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದು, ಟೆಂಟ್ ನಿರ್ಮಿಸಿ ವಾಸಿಸುತ್ತಿದ್ದರು.
ಇಂದು ಹೊಳೆಯಲ್ಲಿ ಸ್ನಾನ ಮಾಡಲೆಂದು ಕುಟುಂಬದ ಹಿರಿಯರು ಮತ್ತು ಮಕ್ಕಳು ಬಂದಿದ್ದರು. ಹೀಗೆ ಸ್ನಾನ ಮಾಡುತ್ತಿದ್ದ ಸಂದರ್ಭ ಈ ಬಾಲಕ ಸಡನ್ನಾಗಿ ಕಾಣೆಯಾಗಿದ್ದು, ಆತ ನೀರಿನಲ್ಲಿ ಮುಳುಗಿರುವ ಅನುಮಾನದಿಂದ ಹುಡುಕಾಡಿದಾಗ ಅಲ್ಲೇ ಪಕ್ಕದಲ್ಲಿ ಆತನ ಮೃತದೇಹ ಕಂಡು ಬಂದಿದೆ. ಹೊಳೆಬದಿಯಲ್ಲಿ ಕಿರುಚಾಟ ಕೇಳಿ ಧಾವಿಸಿ ಬಂದ ಸ್ಥಳೀಯರು, ವಿಚಾರಿಸಿದಾಗ ಈ ದಾರುಣ ಘಟನೆ ಅರಿವಿಗೆ ಬಂದಿದೆ.
Kshetra Samachara
02/02/2022 04:17 pm