ಬಜಪೆ: ಸ್ಕೂಟರ್‌ಅನ್ನು ಕಳವು ಮಾಡಿದ ಆರೋಪಿಯೊಬ್ಬನನ್ನು ಬಜಪೆ ಪೊಲೀಸರು ಇಂದು ಬಂಧಿಸಿದ್ದಾರೆ.
ಕಟೀಲು ಮಲ್ಲಿಗೆಯಂಗಡಿಯ ನಿವಾಸಿ ಹರೀಶ್ ಪೂಜಾರಿ (38)ಎಂದು ಬಂಧಿತ ಆರೋಪಿ. ಬಜಪೆ ಪೊಲೀಸರು ಇಂದು ಬೆಳಿಗ್ಗೆ ಪೆರ್ಮುದೆ ಜಂಕ್ಷನ್‌ನ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಕೂಟರ್‌ನಲ್ಲಿ ಬಂದ ಹರೀಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಹಿಡಿದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಸ್ಕೂಟಿ ಕಳ್ಳತನ ವಿಚಾರ ಬಯಲಿಗೆ ಬಂದಿದೆ.
ಆರೋಪಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಶಿಬರೂರು ಜಾತ್ರೆಯಲ್ಲಿ ಸ್ಕೂಟರ್ ಅನ್ನು ಕಳವು ಮಾಡಿರುದಾಗಿ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Kshetra Samachara
01/02/2022 07:16 pm