ಮಂಗಳೂರು: ನಗರದಲ್ಲಿ ವಿದ್ಯಾರ್ಥಿಗಳ ಜೀವದ ಜೊತೆ ಖಾಸಗಿ ಬಸ್ ಗಳು ಚೆಲ್ಲಾಟ ಆಡ್ತಿದೆ ಎಂಬುದಕ್ಕೆ ಈ ವೀಡಿಯೊ ತಾಜಾ ಉದಾಹರಣೆ! ಬಸ್ ನ ಫುಟ್ ಬೋರ್ಡ್ ಮೇಲೆಯೇ ಬಡಪಾಯಿ ವಿದ್ಯಾರ್ಥಿನಿಯನ್ನು ನಿಲ್ಲಿಸಿ, ನಿರ್ಲಜ್ಜತೆಯಿಂದ ಸಂಚಾರ ನಡೆಸುತ್ತಿರುವ ಈ ಖಾಸಗಿ ಬಸ್ ಸಿಬ್ಬಂದಿಯ ನಿರ್ಲಕ್ಷ್ಯತನ, ಅವಿವೇಕತನಕ್ಕೆ ಏನೆನ್ನಬೇಕು!?
ಇತರೆಡೆಯಂತೆಯೇ ಮಂಗಳೂರಿನಿಂದ- ಬೋಂದೆಲ್ ಗೆ ಹೋಗೊ ಬಸ್ ಗಳೂ ಫುಲ್ ರಶ್ ಆಗಿರುತ್ತದೆ. ಕೋವಿಡ್ ನಿಯಾಮಾವಳಿ ಇದ್ದರೂ ಡೋಂಟ್ ಕೇರ್. ಹಲವು ಕಿಲೋಮೀಟರ್ ಗಳ ವರೆಗೆ ಫುಟ್ ಬೋರ್ಡ್ ನಲ್ಲೇ ವಿದ್ಯಾರ್ಥಿನಿಯೊಬ್ಬಳು ಪ್ರಾಣವನ್ನೇ ಪಣವಾಗಿಟ್ಟು, ಪ್ರಯಾಣ ಮಾಡುತ್ತಿರುವ ಚಿತ್ರಣ ಹೃದಯ ಕಲಕುತ್ತದೆ. ಈ ರೀತಿ ಅಪಾಯಕಾರಿಯಾಗಿ ಸಂಚರಿಸುತ್ತಿರುವ ಖಾಸಗಿ ಬಸ್ ಗಳ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಪ್ರತಿನಿತ್ಯ ಈ ʼಸರ್ಕಸ್ʼ ನಡೆಯುತ್ತಿದ್ದರೂ ಆರ್.ಟಿ.ಒ. ಹಾಗೂ ಸಂಚಾರಿ ಪೊಲೀಸರು ಮಾತ್ರ ಕಣ್ಮುಚ್ಚಿಯೇ ಕುಳಿತಿದ್ದಾರೆ!
Kshetra Samachara
31/01/2022 01:38 pm