ಮಂಗಳೂರು: ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಇಬ್ಬರು ಪೊಲೀಸರ ಮೇಲೆ ಸಮವಸ್ತ್ರದಲ್ಲಿದ್ದಾಗಲೇ ಹಲ್ಲೆ ನಡೆಸಲಾಗಿದೆ ಎಂಬ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಡ್ಯಾನಿ ಪೌಲ್ (39) ಮತ್ತು ಮ್ಯಾಕ್ಷಿಂ ಜೋಸೆಫ್(54) ಬಂಧಿತ ಆರೋಪಿಗಳು. ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಗಳಾದ ಶಿವಾನಂದ ಡಿ.ಟಿ. ಹಾಗೂ ಬೀರೇಂದ್ರ ಜನವರಿ 18ರಂದು ಕರ್ತವ್ಯ ಮುಗಿಸಿ ವಾಮಂಜೂರಿನ ವಸತಿಗೃಹಕ್ಕೆ ತೆರಳುತ್ತಿದ್ದರು. ಅವರು ಠಾಣೆಯಿಂದ ಯೆಯ್ಯಾಡಿ ಜಂಕ್ಷನ್ ತಲುಪುತ್ತಿದ್ದಂತೆ ಕಾರಿನಲ್ಲಿದ್ದ ಇಬ್ಬರು ಅವರನ್ನು ತಡೆದಿದ್ದಾರೆ.
ಬಳಿಕ ಪೊಲೀಸ್ ಸಿಬ್ಬಂದಿ ಬೈಕ್ ಕೀ ತೆಗೆದು ಸಮವಸ್ತ್ರವನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೀವು ನಕಲಿ ಪೊಲೀಸರು, ರೋಲ್ ಕಾಲ್ ಮಾಡುತ್ತಿದ್ದೀರಿ ಎಂದು ನಿಂದಿಸಿದ್ದಾರೆ. ಅಲ್ಲದೆ ಸಮವಸ್ತ್ರದ ಬಟನ್ ಕಿತ್ತು ಹಾಕಿ ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಯನ್ನು ನಿಂದಿಸಿ ಅವರ ಸ್ಲೋ ಚಾಟನ್ನು ಕಿತ್ತು ಹಾಕಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
Kshetra Samachara
22/01/2022 09:39 am