ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಯುವಕನ ಆತ್ಮಹತ್ಯೆ ಪ್ರಕರಣ; ಆನ್ ಲೈನ್ ಲೋನ್ ಆ್ಯಪ್ ಮೇಲೆ ಕೇಸ್

ಮಂಗಳೂರು: ಆನ್ ಲೈನ್ ಲೋನ್ ಆ್ಯಪ್ ಕಿರುಕುಳ ತಡೆಯಲಾರದೆ ನಗರದ ಕುಳಾಯಿಯ ಕಚೇರಿಯಲ್ಲಿಯೇ ಯುವಕ ಆತ್ಮಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆನ್ ಲೈನ್ ಲೋನ್ ಆ್ಯಪ್ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಆ್ಯಪ್ ನವರು ಆನ್ ಲೈನ್ ಮೂಲಕ ಲೋನ್ ಕೊಡುವುದಾಗಿ ನಂಬಿಸಿ, ಆ್ಯಪ್ ಅನ್ನು ಬಳಕೆದಾರರು ಇನ್ ಸ್ಟಾಲ್ ಮಾಡುವಾಗ ಅನೇಕ ಅನುಮತಿಗಳನ್ನು ಕೇಳುತ್ತದೆ. ಆದರೆ, ಲೋನ್ ದೊರಕುವ ಆಮಿಷದಲ್ಲಿ ಎಲ್ಲದಕ್ಕೂ ಎಸ್ ಎಂದು ಕ್ಲಿಕ್ಕಿಸುತ್ತಾರೆ‌. ಈ ಮೂಲಕ ವಂಚಕರು ಲೋನ್ ಪಡೆದವರ ಫೋಟೋ ಗ್ಯಾಲರಿ, ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವುದನ್ನು ಪಡೆಯುತ್ತಾರೆ‌‌. ಬಳಿಕ ಲೋನ್ ಪಡೆದವರು ಸರಿಯಾಗಿ ಸಾಲ ಮರುಪಾವತಿ ಮಾಡದಿದ್ದಲ್ಲಿ ಇವರ ಮೊಬೈಲ್ ನಲ್ಲಿರುವ ಕೆಲವೊಂದು ಫೋಟೊ, ಖಾಸಗಿ ಮಾಹಿತಿಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಾರೆ‌.

ಸುಶಾಂತ್, ತಾವು ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ ತಾನು ಕೆಲಸ ಮಾಡುತ್ತಿದ್ದ ಕುಳಾಯಿಯ ಸನ್ ರೈಸ್ ಕಾರ್ಪೊರೇಷನ್ ಕಚೇರಿಯಲ್ಲಿಯೇ ಡೆತ್ ನೋಟ್ ಬರೆದಿಟ್ಟು ಜ.10ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಚೇರಿ ಬಾಗಿಲನ್ನು ಒಡೆದು ಒಳಹೋಗಿದ್ದಾರೆ. ಡೆತ್ ನೋಟ್ ನಲ್ಲಿ 'ಕ್ಷಮಿಸಿ, ನನಗೆ ಎಲ್ಲರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಣದ ವಿಚಾರದಲ್ಲಿ ತೊಂದರೆಯಾಗಿದೆ. ಆನ್ ಲೈನ್ ನಲ್ಲಿ ಸಾಲ ನೀಡಿದವರು ಕರೆ ಮಾಡಿದರೆ ಮೃತಪಟ್ಟಿದ್ದೇನೆಂದು ಹೇಳಿ' ಎಂದು ಬರೆದಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇದೀಗ ಲೋನ್ ಆ್ಯಪ್ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/01/2022 03:12 pm

Cinque Terre

18.19 K

Cinque Terre

4

ಸಂಬಂಧಿತ ಸುದ್ದಿ