ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ಅಂಗರಗುಡ್ಡೆ ಬಳಿ ಸರಕಾರಿ ಜಾಗ ಅತಿಕ್ರಮಣಕ್ಕೆ ಹುನ್ನಾರ; ಆರೋಪ

ಮುಲ್ಕಿ: ಮುಲ್ಕಿ ಬಳಿಯ ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಅಂಗರಗುಡ್ಡೆ ರಾಜ್ಯ ಹೆದ್ದಾರಿ ಬಳಿ ಕಿಲ್ಪಾಡಿ ಗ್ರಾಪಂಗೆ ಮೀಸಲಿಟ್ಟ ಜಾಗವನ್ನು ಕೆಲ ಭೂ ಮಾಫಿಯಾ ಕುಳಗಳು ಅತಿಕ್ರಮಣ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಆರೋಪಿಸಿದ್ದಾರೆ.

ಅವರು "ಪಬ್ಲಿಕ್ ನೆಕ್ಸ್ಟ್" ಜೊತೆ ಮಾತನಾಡಿ, ಕಿಲ್ಪಾಡಿ ಗ್ರಾಪಂ ನೂತನ ಸ್ವಂತ ನಿರ್ಮಾಣಕ್ಕೆ ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯ ಅಂಗರಗುಡ್ಡೆ ಬಳಿ ಸರ್ವೇ ನಂ. 62 ರಲ್ಲಿ 1ಎಕರೆ 6 ಸೆಂಟ್ಸ್ ಜಾಗ ಮಂಜೂರಾಗಿದ್ದು, ಕೆಲ ಭೂ ಮಾಫಿಯಾ ವ್ಯಕ್ತಿಗಳು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅತಿಕ್ರಮಣಕ್ಕೆ ಸಂಚು ನಡೆಸಿದ್ದಾರೆ.

ಈ ನಡುವೆ ಭೂ ಮಾಫಿಯಾದವರು ಹೊಸ ವರಸೆ ತೋರಿಸಿ, ಸರಕಾರಿ ಜಾಗವನ್ನು ಕಿಲ್ಪಾಡಿ ಪಂಚಾಯತ್ ಅತಿಕ್ರಮಣ ಮಾಡಿದೆ ಎಂದು ಇಲಾಖೆಗೆ ಸುಳ್ಳು ದೂರು ನೀಡಿದ್ದಾರೆ.

ಸರಕಾರಿ ಜಾಗ ಅತಿಕ್ರಮಣ ಮಾಡುವ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಗೋಪಿನಾಥ ಪಡಂಗ ಎಚ್ಚರಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ತಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Edited By : Shivu K
Kshetra Samachara

Kshetra Samachara

09/01/2022 10:35 am

Cinque Terre

23.89 K

Cinque Terre

0

ಸಂಬಂಧಿತ ಸುದ್ದಿ