ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಸರಣಿ ಕಳ್ಳತನ; ಪೊಲೀಸ್ ತನಿಖೆ ಜೋರು; ಇನ್ಸ್ ಪೆಕ್ಟರ್ ವರ್ಗಾವಣೆ?

ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ತೋಕೂರು ದೇವಸ್ಥಾನ ಪರಿಸರದ ಮನೆಗಳಲ್ಲಿ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಸಂಶಯಾಸ್ಪದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಭಾನುವಾರ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ 'ಶಿವದೂತೆ ಗುಳಿಗೆ' ನಾಟಕ ನಡೆಯುತ್ತಿರುವ ಸಂದರ್ಭ ಇಳಿಸಂಜೆ 7ರಿಂದ ರಾತ್ರಿ 12 ಗಂಟೆ ನಡುವೆ ಮೂರು ಮನೆಗಳಲ್ಲಿ ಲಕ್ಷಾಂತರ ಮೌಲ್ಯದ ನಗ-ನಗದು ಕಳ್ಳತನ ನಡೆದಿತ್ತು. ಈ ಮಧ್ಯೆ ಕಳ್ಳರು ಅದೇ ದಿನ ಮತ್ತೆರಡು ಮನೆಗಳ್ಳತನಕ್ಕೆ ಯತ್ನಿಸಿದ್ದರು!

ಪೊಲೀಸರು ದೇವಸ್ಥಾನದ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದು, ನಾಟಕ ನಡೆಯುತ್ತಿರುವಾಗ ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಸಿಸಿ ಕ್ಯಾಮೆರಾದಲ್ಲಿ ಏನೂ ಕಾಣಿಸುತ್ತಿಲ್ಲ ಎನ್ನಲಾಗಿದೆ.

ತಿಂಗಳ ಹಿಂದೆ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕೆಲ ಶಂಕಿತ ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಮತ್ತೆ ಕಳ್ಳತನ ನಡೆದಿದ್ದು, ಪೊಲೀಸರ ವೈಫಲ್ಯತೆ ಪರಿಣಾಮ ಇನ್ಸ್ ಪೆಕ್ಟರ್ ಗೆ ತಲೆದಂಡ ಭೀತಿ ಎದುರಾಗಿದೆ. ಮುಲ್ಕಿ ಠಾಣೆಯ ಮೂಲಗಳ ಪ್ರಕಾರ ಡಿ.15ರ ಒಳಗೆ ಠಾಣೆ ಇನ್ಸ್ ಪೆಕ್ಟರ್ ವರ್ಗಾವಣೆಗೊಳ್ಳಲಿದ್ದಾರೆ ಎನ್ನಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

08/12/2021 08:27 pm

Cinque Terre

10.01 K

Cinque Terre

1

ಸಂಬಂಧಿತ ಸುದ್ದಿ